
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೆ ಎಂ ಎಫ್ ನಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ವಂಚಿಸಿದ ಆರೋಪದಲ್ಲಿ ಚಿತ್ರ ನಿರ್ಮಾಪಕ ಪ್ರಕಾಶ್ ಅವರನ್ನು ಬೆಂಗಳೂರಿನ ಆಡುಗೋಡಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಕೆ ಎಂ ಎಫ್ ನಲ್ಲಿ ತಾಂತ್ರಿಕ ಅಧಿಕಾರಿ ಹುದ್ದೆ ಕೊಡಿಸುವುದಾಗಿ ಹೇಳಿ ಚಿಕ್ಕಬಳ್ಳಾಪುರ ಮೂಲದ ವ್ಯಕ್ತಿಯಿಂದ 10 ಲಕ್ಷ ರೂಪಾಯಿ ಪಡೆದಿದ್ದ ಪ್ರಕಾಶ್ ಬಳಿಕ ವ್ಯಕ್ತಿಗೆ ನಕಲಿ ನೇಮಕಾತಿ ಆದೇಶ ಪ್ರತಿ ನೀಡಿ ವಂಚಿಸಿದ್ದರು.
ವ್ಯಕ್ತಿ ಆದೇಶ ಪ್ರತಿಯೊಂದಿಗೆ ಕೆ ಎಂ ಎಫ್ ಕಚೇರಿಗೆ ತೆರಳಿದ್ದಾಗ ಪ್ರಕರಣ ಬಹಿರಂಗವಾಗಿದೆ.
*ಕುಟುಂಬ ಸಮೇತ ಆತ್ಮಹತ್ಯೆಗೆ ಶರಣಾದ BJP ನಾಯಕ*
https://pragati.taskdun.com/bjp-leaderfamilysuicidemadhyapradesh/