
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಟಿಯು ಆರಂಭ ಮಾಡುತ್ತಿರುವ ಪ್ರಸ್ತುತ ಅವಶ್ಯ ಇರುವ ತಾಂತ್ರಿಕ ವಿಷಯಗಳಲ್ಲಿ ವಸತಿ ಸಹಿತ ಬಿ.ಟೆಕ್. ಹಾಗೂ. ಪಿ.ಜಿ. ಕೋರ್ಸ್ ಗಳನ್ನು ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವಥ್ ನಾರಾಯಣ ಅವರು ಉದ್ಘಾಟಿಸಿದರು.

ಈ ಕಾರ್ಯಕ್ರಮಗಳು ಎಐಸಿಟಿಇ ಯಿಂದ ಅನುಮೋದನೆಗೊಂಡಿವೆ. ವಿ ತಾ ವಿಯು ಭಾರತದ ಪ್ರಮುಖ ಔದ್ಯೋಗಿಕ ರಂಗದ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಕೇಂದ್ರ ಸರ್ಕಾರ ಸ್ವಾಮ್ಯದ ಪ್ರತಿಷ್ಠಿತ ಆರ್ & ಡಿ ಸಂಸ್ಥೆ ಕೇಂದ್ರ ಉತ್ಪಾದನಾ ತಂತ್ರಜ್ಞಾನ ಸಂಸ್ಥೆ (ಸಿ ಎಮ್ ಟಿ ಐ) ಮತ್ತು ಎಂ ಟ್ಯಾಬ್ ಗಳೊಂದಿಗೆ ಶೈಕ್ಷಣಿಕ ಹಾಗೂ ಸಂಶೋಧನಾ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಪ್ರಕಾರ ಈ ಸಂಸ್ಥೆಗಳಲ್ಲಿ ಹಾಗೂ ಕಂಪನಿಗಳಲ್ಲಿರುವ ವಿಷಯ ಪರಿಣಿತರು ಹೊಸ ಕಾರ್ಯಕ್ರಮಗಳಿಗಾಗಿ ಹೊಸ ಕ್ಷೇತ್ರಗಳ ಬೆಳವಣಿಗೆಯ ಬಗ್ಗೆ ವಿಶ್ವವಿದ್ಯಾಲಯದ ಅಧ್ಯಾಪಕರಿಗೆ ತರಬೇತಿ, ಅತಿಥಿ ಉಪನ್ಯಾಸಗಳ ಆಯೋಜನೆ, ಇಂಟರ್ನಶಿಪ್ ಮತ್ತು ವಿದ್ಯಾರ್ಥಿಗಳ ನಿರಂತರ ಮೌಲ್ಯಮಾಪನಕ್ಕಾಗಿ ವಿಶ್ವವಿದ್ಯಾಲಯದೊಂದಿಗೆ ತೊಡಗಿಸಿಕೊಳ್ಳಲಿವೆ.
ಈ ಕಾರ್ಯಕ್ರಮಗಳನ್ನು ಮಂಗಳವಾರ ವಿ ತಾ ವಿ ಯಲ್ಲಿ ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ವಿತಾವಿಯ ಸಹ ಕುಲಾಧಿಪತಿಗಳಾದ ಡಾ. ಸಿ. ಏನ್. ಅಶ್ವಥ್ ನಾರಾಯಣ ಕುಲಪತಿಗಳಾದ ಪ್ರೊ. ಕರಿಸಿದ್ದಪ್ಪ, ಕುಲಸಚಿವರಾದ ಪ್ರೊ. ಎ. ಎಸ್. ದೇಶಪಾಂಡೆ, ಕುಲಸಚಿವರು ಮೌಲ್ಯಮಾಪನರಾದ ಪ್ರೊ. ಸತೀಶ್ ಅಣ್ಣಿಗೇರಿ, ಹಣಕಾಸು ಅಧಿಕಾರಿಗಳಾದ ಎಂ. ಎ. ಸಪ್ನ, ಎಲ್ಲ ವಿಭಾಗದ ಮುಖ್ಯಸ್ಥರು, ವಿಶೇಷಾಧಿಕಾರಿಗಳು, ಬೋಧಕ ಸಿಬ್ಬಂದಿ ಉಪಸ್ಥಿತರಿದ್ದರು.
ಈ ಸಹಭಾಗಿತ್ವದ ಕೋರ್ಸ್ಗಳ ಪಠ್ಯಕ್ರಮವು ವಿದ್ಯಾರ್ಥಿಗಳಿಗೆ ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳುವುದನ್ನು ಮಾತ್ರವಲ್ಲದೆ ವ್ಯವಸ್ಥಾಪನೆ, ನಿರ್ವಹಣಾ ವಿಜ್ಞಾನ ಮತ್ತು ಮಾನವೀಯ ಮೌಲ್ಯಗಳ ಜ್ಞಾನವನ್ನು ನೀಡಲಿವೆ.
ಐ ಟಿ ದಿಗ್ಗಜ ಟಿ ಸಿ ಎಸ ಸಹಭಾಗಿತ್ವದಲ್ಲಿ ಕಂಪ್ಯೂಟರ್ ಸೈನ್ಸ್ ಆಂಡ್ ಬಿಸಿನೆಸ್ ಸಿಸ್ಟಮ್ ಹಾಗೂ ಸಿ ಎಂ ಟಿ ಐ ಸಹಭಾಗಿತ್ವದಲ್ಲಿ ರೊಬೊಟಿಕ್ಸ್ ಆಂಡ್ ಆಟೋಮೇಷನ್ ಎರಡು ಬಿ. ಟೆಕ್. ಕೋರ್ಸ್ ಗಳನ್ನು ಬೆಳಗಾವಿಯ ವಿ ತಾ ವಿ ಯ ಜ್ಞಾನಸಂಗಮ ಆವರಣದಲ್ಲೇ ನೀಡಲಿದ್ದು ಸಿ ಎಂ ಟಿ ಐ ಸಹಭಾಗಿತ್ವದ ಇನ್ನೊಂದು ಕೋರ್ಸ್ ಮೆಕ್ಯಾನಿಕಲ್ ಆಂಡ್ ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್ ಒಂದು ಬಿ. ಟೆಕ್. ಕೋರ್ಸ್ ನ್ನು ವಿ ತಾ ವಿ ಮುದ್ದೇನಹಳ್ಳಿಯ ಆವರಣದಲ್ಲಿ ಆರಂಭವಾಗಲಿವೆ. ಈ ಮೂರು ಬಿ. ಟೆಕ್. ಕೋರ್ಸ್ ಗಳು ವಸತಿ ಸಹಿತವಾಗಿದ್ದು ಸುಸಜ್ಜಿತ ವಸ ತಿ ನಿಲಯಗಳ ವ್ಯವಸ್ಥೆ ಇದೆ. ಈ ಮೂರೂ ಕೋರ್ಸ್ ಗಳಿಗೆ ಸಿ ಇ ಟಿ ಮುಖಾಂತರ ಮಾತ್ರ ಪ್ರವೇಶವಿದ್ದು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿಗೆ ನಿಗದಿ ಪಡಿಸಿದ ಅತ್ಯಂತ ಕಡಿಮೆ ಶುಲ್ಕ ಇರುತ್ತದೆ. ಪ್ರವೇಶ ಬಯಸುವ ವಿದ್ಯಾರ್ಥಿಗಳು ಸಿ ಇ ಟಿ ಆನ್ ಲೈನ್ ಕೌನ್ಸಲಿಂಗ್ ಮುಖಾಂತರ ಪ್ರವೇಶ ಪಡೆಯಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ