Karnataka News

*ಬೇಸಿಗೆ ರಜೆ: ಪ್ರವಾಸಕ್ಕೆ ತೆರಳುವ ಮುನ್ನ ಮನೆ ಭದ್ರತೆ ಬಗ್ಗೆ ಎಚ್ಚರವಿರಲಿ*

ಕಮಿಷನರ್ ಸಲಹೆ

ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಕಳ್ಳತನ, ದರೋಡೆ, ಅಪರಾಧ ಪ್ರಕರಣಗಳು ಬೆಂಗಳೂರು ನಗರದಲ್ಲಿ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ನಿವಾಸಿಗಳು ಮುಂಜಾಗೃತಾ ಕ್ರಮಗಳನು ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಬೆಂಗಳೂರಿಗರಿಗೆ ಸೂಚಿಸಿದ್ದಾರೆ.

ಬೇಸಿಗೆ ರಜೆ ಆರಂಭವಾಗುತ್ತಿರಿರುವುದರಿಂದ ಮನೆ ಬೀಗಹಾಕಿ ಊರುಗಳಿಗೆ, ಪ್ರವಾಸಕ್ಕೆ ತೆರಳುವವರು ಎಚ್ಚರಿಕೆ ವಹಿಸಿ ಕೆಲ ಸಲಹೆಗಳನ್ನು ಪಾಲಿಸಿಸುವಂತೆ ತಿಳಿಸಿದ್ದಾರೆ.

Home add -Advt

ಎರಡು ಮೂರು ದಿನ ಅಥವಾ ದೀರ್ಘ ಕಾಲ ಪ್ರವಾಸಕ್ಕೆ ಹೋಗುವಾಗ, ರಜೆಗೆಂದು ಊರುಗಳಿಗೆ ತೆರಳುವಾಗ ಮನೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ಇಡಬೇಡಿ. ಬೆಲೆ ಬಾಳುವ ವಸ್ತುಗಳನ್ನು ಬ್ಯಾಂಕ್ ಅಥವಾ ಲಾಕರ್ ಗಳಲ್ಲಿ ಇಡುವುದು ಸೂಕ್ತ ಎಂದು ತಿಳಿಸಿದ್ದಾರೆ.

ಒಂದು ದಿನಕ್ಕಿಂತ ಹೆಚ್ಚು ದಿನ ಪ್ರವಾಸಕ್ಕೆ ಹೋಗುವುದಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ. ಇಂತಹ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ಗಸ್ತು ತಿರುಗುವ ಪೊಲೀಸರಿಗೆ ಸುಲಭವಾಗುತ್ತದೆ.

ಮನೆಗೆ ಗುಣಮಟ್ಟದ ಬೀಗ ಅಳವಡಿಸಿ. ಯಾವುದೇ ಕಾರಣಕ್ಕೂ ಬೀಗದ ಕೀಯನ್ನು ಮನೆ ಪಕ್ಕ, ಎಲ್ಲೋ ಇಡುವ ಅಭ್ಯಾಸ ಮಾಡಿಕೊಳ್ಳಬೇಡಿ.

ಮನೆ ಕೆಲಸದವರ ನೇಮಕ ಮಾಡಿಕೊಳ್ಳುವಾಗ ಸಾಕಷ್ಟು ಎಚ್ಚರಿಕೆ ಇರಲಿ. ಮನೆಗಳಲ್ಲಿ ಎಲ್ಲೆಂದರಲ್ಲಿ ಕೆಲಸದವರು ಓದಾಡಲು ಬಿಡಬೇಡಿ. ಬೆಲೆ ಬಾಳುವ ವಸ್ತುಗಳನ್ನು ಅವರಿಗೆ ಕಾಣುವಂತೆ ಇಡುವುದು, ಪ್ರದರ್ಶಿಸುವುವುದು ಸರಿಯಲ್ಲ ಎಂದು ಸಲಹೆ ನೀಡಿದ್ದಾರೆ.

Related Articles

Back to top button