Latest

ಚಿತ್ರ ನಿರ್ಮಾಪಕ ಕಮಲ್ ಕಿಶೋರ್ ವಿರುದ್ಧ ಪ್ರಕರಣ ದಾಖಲು

ಪ್ರಗತಿವಾಹಿನಿ ಸುದ್ದಿ, ಮುಂಬೈ: ಚಿತ್ರ ನಿರ್ಮಾಪಕ ಕಮಲ್ ಕಿಶೋರ್ ಮಿಶ್ರ ಅವರ ವಿರುದ್ಧ ಅವರ ಪತ್ನಿಯೇ ಪೊಲೀಸ್ ದೂರು ದಾಖಲಿಸಿದ್ದಾರೆ.

ಕಳೆದ ಅ.19ರಂದು ಕಮಲ್ ಕಿಶೋರ್ ಅವರು ತಮ್ಮ ಮೇಲೆ ಕಾರು ಹಾಯಿಸಿ ತಮ್ಮನ್ನು ಗಾಯಗೊಳಿಸಿದ್ದಾಗಿ ಅವರ ಪತ್ನಿ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

Home add -Advt

ಅಂಧೇರಿ ಹೊರವಲಯದ ಕಟ್ಟಡವೊಂದರ ಎದುರಿನ ಪಾರ್ಕಿಂಗ್ ನಲ್ಲಿ ಕಮಲ್ ಕಿಶೋರ್ ಅವರು ಕಾರಿನಲ್ಲಿ ಮಹಿಳೆಯೊಬ್ಬಳೊಂದಿಗೆ ಕಾಣಿಸಿಕೊಂಡಿದ್ದಕ್ಕೆ ಪ್ರಶ್ನಿಸಿದ್ದಕ್ಕೆ ಅವರಿಗೆ ಕಾರಿನಿಂದ ಡಿಕ್ಕಿ ಹೊಡೆದಿದ್ದು ಕೈಕಾಲುಗಳಿಗೆ ಗಾಯವಾಗಿರುವುದಾಗಿ ಪತ್ನಿ ಹೇಳಿದ್ದಾರೆ. 

ಈ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದ್ದು ಕಮಲ್ ಕಿಶೋರ್ ಸದ್ಯ ನಾಪತ್ತೆಯಾಗಿದ್ದಾರೆ. ಅವರ ಬಂಧನಕ್ಕಾಗಿ ಕ್ರಮ ವಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಲು ಕಳೆದುಕೊಂಡ ವ್ಯಕ್ತಿಗೆ ವಿದ್ಯುತ್ ಚಾಲಿತ ವಾಹನ ನೀಡಿದ ಲಕ್ಷ್ಮಣ ಸವದಿ

 

Related Articles

Back to top button