Kannada NewsKarnataka NewsLatest

*ಚುನಾವಣಾ ಆಯುಕ್ತರಿಗೆ ದೂರು*

ಜಾಗೃತ ನಾಗರಿಕರು ಕರ್ನಾಟಕ ವತಿಯಿಂದ ದೂರು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಚುನಾವಣೆಯ ಹೊಸ್ತಿಲಲ್ಲಿ ಬೆಂಗಳೂರಿನಲ್ಲಿ ಕೋಮುದ್ವೇಷ ಹೆಚ್ಚಿಸ , ಗಲಭೆ ಎಬ್ಬಿಸಲು ಪ್ರಯತ್ನಿಸಿದ ಸಂಸದರು ಮತ್ತು ಶಾಸಕರುಗಳ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ಜಾಗೃತ ನಾಗರಿಕರು ಕರ್ನಾಟಕ ವತಿಯಿಂದ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿ ಮನವಿ ಮಾಡಲಾಯಿತು.

ಬೆಂಗಳೂರಿನ ನಗರ್ತಪೇಟೆ ಪ್ರದೇಶದಲ್ಲಿ ನಡೆಯಿತೆನ್ನಲಾದ ಒಂದು ಘಟನೆಯನ್ನಾಧರಿಸಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿಯ ಹಾಲಿ ಸಂಸದರೂ ಆಗಿರುವ ಸಂಭಾವ್ಯ ಅಭ್ಯರ್ಥಿ ತೇಜಸ್ವಿ ಸೂರ್ಯ, ಕೇಂದ್ರದ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಸೇರಿದಂತೆ ಬಿಜೆಪಿಯ ಕೆಲ ಕಾರ್ಯಕರ್ತರು ಬೆಂಗಳೂರಿನ ನಗರ್ತಪೇಟೆಯಲ್ಲಿ ಸಾವಿರಾರು ಜನರನ್ನು ಸೇರಿಸಿ ಪ್ರತಿಭಟನೆ ನಡೆಸಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಆತಂಕಕಾರಿ ವಿಷಯವೂ ಹೌದು.
ನಗರ್ತ ಪೇಟೆ ಪ್ರಕರಣ ವಿಚಾರವಾಗಿ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರಿನಲ್ಲಿ ಯಾವುದೇ ಧಾರ್ಮಿಕ ಘಟನೆಗೆ ಧಾರ್ಮಿಕ ನೆಲೆಯ ಗಲಾಟೆಗಳ ಕುರಿತು ಉಲ್ಲೇಖವಿಲ್ಲ. ಅಲ್ಲದೇ ಅಂತಹ ಯಾವ ಘಟನೆಗಳು ನಡೆದಿಲ್ಲ ಎಂಬ ಪೋಲೀಸರ ಹೇಳಿಕೆ ಮಾಧ್ಯಮಗಳಲ್ಲಿ ವರದಿಯಾಗಿದೆ.

ಅಲ್ಲಿ ಯಾವುದೇ ಇಂತಹ ಘಟನೆ ನಡೆದಿದ್ದರೂ ಅದರ ಗಹನತೆಯನ್ನಾಧರಿಸಿ ಪೋಲೀಸರು ಕ್ರಮ ಕೈಗೊಳ್ಳುವುದು ನೆಲದ ಕಾನೂನಿನ ಪ್ರಕಾರ ನಡೆಯಬೇಕು. ಆದರೆ ನಡೆದ ಘಟನೆಗೆ ಕೋಮುವಾದದ ಬಣ್ಣ ಬಳಿದು ಅದನ್ನು ಕೋಮುದ್ವೇಷ ಹರಡಲು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಪ್ರಯತ್ನ ಮಾಡುತ್ತಿದ್ದಾರೆ. ಇದು ತೇಜಸ್ವಿ ಸೂರ್ಯ ಎಕ್ಸ್‌ ಖಾತೆ ಪ್ರಕಾರ ಸ್ಪಷ್ಟವಾಗುತ್ತದೆ. ತೇಜಸ್ವಿ ಸೂರ್ಯ(ಮೋದಿಯ ಪರಿವಾರ) ಹೆಸರಿನಲ್ಲಿ ಖಾತೆ ಇದೆ. ತೇಜಸ್ವಿ ಸೂರ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ಪ್ರಚೋದನಕಾರಿಯಾಗಿ ಮಾತನಾಡಿ, ಅನಗತ್ಯ ದೋಷಾರೋಪಣೆ ವಿಡಿಯೋ ತುಣುಕುಗಳು ಸಾಮಾಜಿ ಮಾಧ್ಯಮಗಳು ಸೇರಿದಂತೆ ಬಹುತೇಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.


ಇನ್ನು ಮಾರ್ಚ್‌ ೧೯ ರಂದು ನಗರ್ತಪೇಟೆಯ ಬೀದಿಗಳಲ್ಲಿ ಹಿಂದೂ ಜಾಗರಣ ವೇದಿಕೆ,ಹಾಗೂ ಭಜರಂಗ ದಳದ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ ಮತ್ತು ಆ ಪ್ರತಿಭಟನೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಾಗೂ ರಾಜಾಜಿನಗರದ ಶಾಸಕ ಸುರೇಶ್ ಕುಮಾರ, ಬೆಂಗಳೂರು ದಕ್ಷಿಣ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಸಹ ಇವರೊಂದಿಗೆ ಭಾಗವಹಿಸಿ, . ಪ್ರತಿಭಟನಾಕಾರರು ರಸ್ತೆಯ ಮೇಲೆ ಹನುಮಾನ್ ಚಾಲೀಸ್ ಪಠಣ ಮಾಡಲು ಕುಳಿತಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.

ದೇಶದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಇಡೀ ದೇಶದಲ್ಲೀಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳಾಗಿದ್ದವರು ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅಲ್ಲದೇ, ಭಾರತದ ಸಂವಿಧಾನದ ಪ್ರತಿ ಕಲಮುಗಳನ್ನು ಎತ್ತಿ ಹಿಡಿಯಬೇಕು. ದೇಶದ ಸರ್ವೋಚ್ಚ ನ್ಯಾಯಾಲಯವೂ ಕೂಡ ದ್ವೇಷ ಪ್ರಚೋದನೆಯ ಮಾತುಗಳನ್ನಾಡುವುದನ್ನು ನಿಗ್ರಹಿಸಬೇಕೆಂದು ಹಲವು ಬಾರಿ ಹೇಳಿದೆ.

ಆದರೆ ಈ ಮೇಲೆ ಉಲ್ಲೇಖಿಸಿದ ಪ್ರಮುಖರು ಕೇಂದ್ರದಲ್ಲಿ ಸರಕಾರವನ್ನು ನಡೆಸುತ್ತಿರುವ, ರಾಷ್ಟ್ರೀಯ ಪಕ್ಷದ ಜನ ಪ್ರತಿನಿಧಿಗಳು. ದೇಶದ ಸಂವಿಧಾನವನ್ನು ಗೌರವಿಸಿ ಕಾಪಾಡುವ ಕೆಲಸದಲ್ಲಿ ತೊಡಗುವ ಬದಲು ಕೋಮುದ್ವೇಷವನ್ನು ಹೆಚ್ಚಿಸುವ ರೀತಿ ಪ್ರಚೋದನಕಾರಿಯಾಗಿ ಮಾತನಾಡುತ್ತಿರುವುದು, ಜನರನ್ನು ದೊಂಬಿ ಗಲಭೆಗಳಿಗೆ ಪ್ರಚೋದಿಸುತ್ತಿರುವುದು, ಧರ್ಮದ್ವೇಷಕ್ಕೆ ಪುಷ್ಟಿಕೊಡುತ್ತಿರುವುದು ಭಾರತೀಯ ದಂಡಸಂಹಿತೆಯ ಪ್ರಕಾರ ಕೂಡ ಶಿಕ್ಷಾರ್ಹ ಅಪರಾಧವಾಗಿದೆ ಎಂದು ದೂರಿನಲ್ಲಿ ಜಾಗೃತ ನಾಗರಿಕರು ಕರ್ನಾಟಕ ಇದರ ದೂರಿನಲ್ಲಿ ಹೇಳಲಾಗಿದೆ.
ವೇದಿಕೆಯ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ವಿಮಲಾ.ಕೆ.ಎಸ್, ಮಾವಳ್ಳಿ ಶಂಕರ್, ಬಿ.ಶ್ರೀಪಾದ ಭಟ್, ಡಾ.ಬಂಜಗೆರೆ ಜಯಪ್ರಕಾಶ್, ಟಿ.ಸುರೇಂದ್ರ ರಾವ್, ದಿನೇಶ್ ಅಮಿನಮಟ್ಟು, ಜಾಣಗೆರೆ ವೆಂಕಟರಾಮಯ್ಯಮತ್ತಿತರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button