ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗ್ರಾಮೀಣ ಕ್ಷೇತ್ರದ ಕಿಣಯೆ ಗ್ರಾಮದ ಗಣಪತಿ ಗಲ್ಲಿ ಹಾಗೂ ಗುರವ ಸ್ಮಶಾನಕ್ಕೆ ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ ಸೇರಿ ಭೂಮಿ ಪೂಜೆಯನ್ನು ಕೈಗೊಂಡು ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೃಣಾಲ್ ಹೆಬ್ಬಾಳಕರ, “ಗ್ರಾಮೀಣ ಕ್ಷೇತ್ರದ ಬಹುತೇಕ ರಸ್ತೆಗಳು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಕ್ರಿಯಾಶೀಲತೆ, ಜನಪರತೆ ಹಾಗೂ ದಿಟ್ಟ ನೇತೃತ್ವದ ಕಾರಣ ಅಭೂತಪೂರ್ವವಾಗಿ ಅಭಿವೃದ್ಧಿಗೊಂಡಿವೆ. ಗಣಪತಿಗಲ್ಲಿ ಹಾಗೂ ಗುರವ ಸ್ಮಶಾನ ರಸ್ತೆಗಳ ನಿರ್ಮಾಣಕ್ಕೆ ಜನರ ಬೇಡಿಕೆಗೆ ಸ್ಪಂದಿಸಿರುವ ಲಕ್ಷ್ಮೀ ಹೆಬ್ಬಾಳಕರ ಅವರು 50 ಲಕ್ಷ ರೂ. ಮಂಜೂರು ಮಾಡಿಸಿ, ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದರ ಪ್ರಯೋಜನ ಪಡೆದು ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಜನತೆ ಮತ್ತೊಮ್ಮೆ ಆಶೀರ್ವದಿಸಬೇಕು” ಎಂದರು.
ಗ್ರಾಮದ ಹಿರಿಯರು, ಯಲ್ಲಪ್ಪ ಗುರವ, ಬೋಮಾನೆ ಗುರವ, ಪರಶುರಾಮ ಗುರವ, ಶಿವಾಜಿ ಗುರವ, ವಿನಾಯಕ ಗುರವ, ಮಹೇಶ ಗುರವ, ಕೃಷ್ಣ ಗುರವ, ವಿಷ್ಣು ಖೆಮನಾಳ್ಕರ್, ನಾಗೇಶ ಗುರವ, ಸಂಜಯ ಕಾಮಕರ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ