
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕನ್ನಡ -ಮರಾಠಿಗರ ಸಂಗಮದಂತಿರುವ ಕ್ಷೇತ್ರದ ಕರಡಿಗುದ್ದಿ, ಮಾರಿಹಾಳ, ಸುಳೇಭಾವಿ, ಮೊದಗಾ, ಬಾಳೇಕುಂದ್ರಿ ಬಿಕೆ, ಬಾಳೇಕುಂದ್ರಿ ಕೆ ಎಚ್, ಮಾವಿನಕಟ್ಟಿ, ಸಾಂಬ್ರಾ,
ತಾರಿಹಾಳ, ಚಂದನಹೊಸೂರ, ಶಿಂಧೋಳ್ಳಿ, ಮುತಗಾ, ಹಿರೇ ಬಾಗೇವಾಡಿ, ಬಡಾಲ ಅಂಕಲಗಿ, ಮುತ್ನಾಳ, ಅರಳಿಕಟ್ಟಿ, ಬೆಂಡಿಗೇರಿ, ಇನಾಂ ಬಡಸ್, ಕುಕಡೊಳ್ಳಿ, ಸಂತಿ ಬಸ್ತವಾಡ, ಮಾರ್ಕಂಡೇಯ ನಗರ, ಹಲಗಾ ಬಸ್ತವಾಡ, ಕೊಂಡಸಕೊಪ್ಪ, ಕೆಕೆ ಕೊಪ್ಪ, ನಂದಿಹಳ್ಳಿ, ರಾಜಹಂಸಗಡ್, ಬೆಳವಟ್ಟಿ, ಬಿಜಗರಣಿ, ಬೆಕ್ಕಿನಕೇರಿ, ಅತಿವಾಡ, ಉಚಗಾಂವ, ತುರಮರಿ, ಕುದ್ರೆಮನಿ, ಕಂಗ್ರಾಳಿ ಕೆ ಎಚ್, ಬೆಳಗುಂದಿ, ಸುಳಗಾ, ಹಂಗರಗಾ, ತುಮ್ಮರಗುದ್ದಿ
ಮುಂತಾದ ಸ್ಥಳಗಳಲ್ಲಿ
ಜನರು ದೊಡ್ಡ ದೊಡ್ಡ ಪರದೆಗಳ ಮೂಲಕ ಕಾರ್ಯಕ್ರಮ ವೀಕ್ಷಿಸಿದರು.

ಪ್ರತಿಜ್ಞಾ ಕಾರ್ಯಕ್ರಮದ ನೇರ ಪ್ರಸಾರ ಆರಂಭವಾಗುತಿದ್ದಂತೆಯೇ ಕ್ಷೇತ್ರದ ಜನ ತಂಡೋಪ ತಂಡವಾಗಿ ಆಗಮಿಸಿ ಕಾರ್ಯಕ್ರಮವನ್ನು ವೀ
ಕ್ಷಿಸಿದರು.
ಪ್ರತಿಜ್ಞಾ
ಕಾರ್ಯಕ್ರಮದ ನೇರ ಪ್ರಸಾರದ ಮುನ್ನ ಬೆಳಗಾವಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳ ಪ್ರಮುಖ ದೇವಸ್ಥಾನಗಳಲ್ಲಿ
ಪೂಜೆ ನೆರವೇರಿಸಲಾಯಿತು. ಪ್ರತಿ ಗ್ರಾಮದಲ್ಲಿ ತಮ್ಮದೇ ಕಾರ್ಯಕ್ರಮ, ತಮ್ಮೂರಲ್ಲೇ ಕಾರ್ಯಕ್ರಮ ನಡೆಯುತ್ತಿದೆ ಎನ್ನುವ ರೀತಿಯಲ್ಲಿ ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿದರು. ಮುಖಂಡರು ಭಾಷಣಗಳನ್ನು ಮಾಡಿದರು. ಪ್ರತಿಜ್ಞಾ
ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಲಿ
, ಕಾಂಗ್ರೆಸ್ ಪಕ್ಷವು ಮತ್ತೊಮ್ಮೆ ರಾಜ್ಯದಲ್ಲಿ ವಿಜ್ರಂಭಿಸಲಿ ಎಂದು
ಅಭಿಷೇಕವನ್ನು ಮಾಡಿಸಲಾಯಿತು.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬೆಂಗಳೂರಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೆ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ, ಪುತ್ರ ಮೃಣಾಲ ಹೆಬ್ಬಾಳಕರ್, ಕಾಂಗ್ರೆಸ್ ಮುಖಂಡರಾದ ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ ಸೇರಿದಂತೆ ನೂರಾರು ಮುಖಂಡರು, ಕಾರ್ಯಕರ್ತರು ವಿವಿಧೆಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.