Latest

*ಕಾಂಗ್ರೆಸ್ ಭ್ರಷ್ಟಾಚಾರದ ಕೂಪ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ :  ಕಾಂಗ್ರೆಸ್ ಭ್ರಷ್ಟಾಚಾರದ ಕೂಪ ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಭ್ರಷ್ಟಾಚಾರದ ವಿರುದ್ಧ  ಕಾಂಗ್ರೆಸ್ ಕರೆ ನೀಡಿರುವ ಬಂದ್ ಗೆ ಸಂಬಂಧಿಸಿದಂತೆ ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

*ಕಾಂಗ್ರೆಸ್ ಖುದ್ದು ಬಂದ್ ಆಗುವ ಕಾಲ ಬಂದಿದೆ*

Home add -Advt

ಕಾಂಗ್ರೆಸ್ ಮಾಡಿರುವ ಕರ್ಮಕಾಂಡ ಒಂದೆರಡಲ್ಲ. ಕಾಂಗ್ರೆಸ್ ಖುದ್ದು ಬಂದ್ ಆಗುವ ಕಾಲ ಬಂದಿದೆ ಎಂದು ಹೇಳಿದರು. ಪ್ರತಿಭಟನೆ, ಬಂದ್ ಮೂಲಕ ತಮ್ಮ ರಾಜಕೀಯ ಭವಿಷ್ಯ ಬರೆಯಬಹುದೆಂದು ಬಂದ್ ಗೆ ಕರೆ ನೀಡಿದ್ದಾರೆ. ಅವರಿಗೆ ಯಾವ ಪ್ರತಿಕ್ರಿಯೆ ದೊರೆಯಿವುದಿಲ್ಲ ಎಂದರು. 

*ಗುರಿ ನೀಡಿದ್ದರು*

ಆಪಾದನೆ ಮಾಡುವವರು ಮೊದಲು ಶುದ್ಧಹಸ್ತರಿರಬೇಕು. ಆಗ ಬೆಲೆ ಸಿಗುತ್ತದೆ. ದಿಂಬು, ಹಾಸಿಗೆ, ಬಿಸ್ಕತ್ತು, ಕಾಫಿಯಂಥ ಸಣ್ಣ ವಿಷಯದಿಂದ ಹಿಡಿದು ನೀರಾವರಿಯವರೆಗೆ ಭ್ರಷ್ಟಾಚಾರ ಮಾಡಿದ್ದಾರೆ. ಸಿದ್ದರಾಮಯ್ಯ ಅವರು  ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಮಂತ್ರಿಗಳಿಗೆ  ಗುರಿ ನೀಡಿದ್ದರು. ಎಂ.ಬಿ.ಪಾಟೀಲ್, ಜಾರ್ಜ್, ಮಹದೇವಪ್ಪ ಅವರನ್ನು  ಎಷ್ಟು ಗುರಿ ನೀಡದ್ದರು ಎಂದು  ಕೇಳಬೇಕು ಎಂದರು.

*ಕಾಂಗ್ರೆಸ್ ಕೈ ಭ್ರಷ್ಟಾಚಾರದಿಂದ ಕೂಡಿದೆ* 

ಕೈ ಸಂಪೂರ್ಣವಾಗಿ ಭ್ರಷ್ಟಾಚಾರ ದಿಂದ ಕೂಡಿದ್ದು, ಇವೆಲ್ಲಾ ಆಟ ನಡೆಯೋಲ್ಲ.  2023 ರ ಮೇ ನಲ್ಲಿ ನಡೆಯುವ ಚುನಾವಣಾ ಅಖಾಡದಲ್ಲಿ ಜನ ತೀರ್ಮಾನ ಮಾಡುತ್ತಾರೆ ಎಂದರು. 

ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆ ಮರುಉದ್ಘಾಟನೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ  ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ 50 ಲಕ್ಷ ರೂ. ಗಳನ್ನು ಬಿಡುಗಡೆ ಮಾಡಿದ್ದರು. ಒಣಪ್ರತಿಷ್ಠೆಗೆ ಈ ಕೆಲಸ ಮಾಡಿದ್ದಾರೆ. ರಾಷ್ಟ್ರನಾಯಕರ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು. 

ಕುಕ್ಕರ್ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯ ಬಂಧನವಾಗಿದ್ದು, ಐ.ಎಸ್.ಐ.ಎಸ್ ಸಂಘಟನೆ ಹೊಣೆ ಹೊತ್ತುಕೊಂಡಿದೆ.  ಈ ಬಗ್ಗೆ ಡಿ.ಕೆ.ಶಿವಕುಮಾರ್ ಅದೊಂದು ಸಾದಾ ಬಾಂಬ್ ಎಂದಿದ್ದರು ಈವ ಏನು ಹೇಳಿತ್ತಾರೆ ಎಂದು ಸಿಎಂ ಮರುಪ್ರಶ್ನಿಸಿದರು.

ReplyForward

Related Articles

Back to top button