Kannada NewsLatestNational
ಸಾರಾಗೆ ಸಚಿನ್ ವಿಚ್ಛೇದನ ಬಹಿರಂಗ

ಪ್ರಗತಿವಾಹಿನಿ ಸುದ್ದಿ, ಜೈಪುರ: ರಾಜಸ್ಥಾನದ ಕಾಂಗ್ರೆಸ್ ಮುಖಂಡ, ಸಚಿನ್ ಪೈಲಟ್ ಅವರು ತಮ್ಮ ಪತ್ನಿ ಸಾರಾಗೆ ವಿಚ್ಛೇದನ ನೀಡಿದ್ದಾರೆ.
ಮುಂಬರುವ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಟೋಂಕ್ ಕ್ಷೇತ್ರದಿಂದ ಸ್ಪರ್ಧಿಯಾಗಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಚಿನ್ ಪೈಲಟ್ ತಾವು ಸಾರಾ ಅವರೊಂದಿಗೆ ವಿಚ್ಛೇದನ ಪಡೆದಿರುವುದಾಗಿ ಅಫಿಡಾವಿಟ್ ನಲ್ಲಿ ಘೋಷಿಸಿಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಪುತ್ರಿ ಸಾರಾ ಅಬ್ದುಲ್ಲಾ ಜತೆ ಸಚಿನ್ ಪೈಲಟ್ 2004ರಲ್ಲಿ ವಿವಾಹವಾಗಿದ್ದರು. ಎರಡು ದಶಕಗಳಷ್ಟು ದೀರ್ಘ ಕಾಲದ ದಾಂಪತ್ಯ ಮುರಿದುಬಿದ್ದಿರುವ ಬಗ್ಗೆ ಅವರು ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.



