
ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಯುವ ಕಾರ್ಯಕರ್ತರೊಬ್ಬರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ.
ಮನೋಜ್ ಪ್ರಕಾಶ್ ಉಡಗಣ (28) ಹತ್ಯೆಯಾದ ಯುವಕ. ಹುಟ್ಟುಹಬ್ಬದ ದಿನವೇ ಮನೋಜ್ ಅವರನ್ನು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮದ್ಯ ಸೇವನೆ ಮಾಡಿಸಿ ವರದಾ ನದಿ ಸೇತುವೆ ಮೇಲಿಂದ ತಳ್ಳಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ನನ್ನ ಸಹೋದರನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ್ದಾರೆ ಎಂದು ಮನೋಜ್ ಸಹೋದರ ಶಂಭು ಆರೋಪಿಸಿದ್ದಾರೆ. ಸವಣೂರು ಬಳಿಯ ಮೆಳ್ಳಾಗಟ್ಟಿ ಬಳಿ ಮನೋಜ್ ಶವ ಪತ್ತೆಯಾಗಿದೆ. ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.