
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನರೇಗಾ ಯೋಜನೆ ಹೆಸರು ಬದಲಾವಣೆ ಮತ್ತು ಯೋಜನೆಯ ಸ್ವರೂಪ ಬದಲಾಯಿಸಿದ್ದನ್ನು ಪ್ರತಿಭಟಿಸಿ ಕಾಂಗ್ರೆಸ್ ಪಕ್ಷ ಭಾನುವಾರ ಉಪವಾಸ ಸತ್ಯಾಗ್ರ ನಡೆಸಲಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು *ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ* (MG NREGA) ಹೆಸರು ಬದಲಾಯಿಸಿ, ವಿಕಸಿತ ಭಾರತ ಜಿ ರಾಮ್ ಜಿ (VB JI RAM JI) ಎಂದು ಹೆಸರು ಬದಲಾಯಿಸಿದೆ. ಈ ಕಾಯ್ದೆಯ ವಿರುದ್ಧವಾಗಿ AICC ಯ ಆದೇಶದ ಮೇರೆಗೆ ಬೆಳಗಾವಿ ಜಿಲ್ಲಾ ಗ್ರಾಮೀಣ, ನಗರ ಮತ್ತು ಚಿಕ್ಕೋಡಿ ಕಾಂಗ್ರೆಸ್ ಘಟಕಗಳ ವತಿಯಂದ *ರವಿವಾರ* ದಿ *11/01/2026 * ರಂದು ಮುಂಜಾನೆ 10 ಘಂಟೆಯಿಂದ ಸಾಯಂಕಾಲ 5ವರೆಗೆ” *ಕಾಂಗ್ರೆಸ್ ಭವನದ* ” ಎದುರಿಗೆ ಒಂದು ದಿವಸದ *ಉಪವಾಸ ಸತ್ಯಾಗ್ರಹ* ಮಾಡಲು ನಿರ್ಧರಿಸಿದೆ.
ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕದ ಉಸ್ತುವಾರಿಯಾದ ಗೋಪಿನಾಥ್ ಪಳನಿಯಪನ್ನ , ಉಸ್ತುವಾರಿ ಸಚಿವರಾದ ಸತೀಶ ಅಣ್ಣಾ ಜಾರಕಿಹೊಳಿ, ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಲೋಕಸಭಾ ಸದ್ಯಸರು, ಜಿಲ್ಲೆಯ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಅಧ್ಯಕ್ಷರುಗಳು ಮತ್ತು ಜಿಲ್ಲೆಯ ಪಕ್ಷದ ಎಲ್ಲ ನಾಯಕರು ಪದಾಧಿಕಾರಿಗಳು ಉಪಸ್ಥಿತರಿರವರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ತಿಳಿಸಿದ್ದಾರೆ.


