*ಬೋರಗಾಂವ ಪಟ್ಟಣದಲ್ಲಿ 50ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ*

ಪ್ರಗತಿವಾಹಿನಿ ಸುದ್ದಿ: ನಿಪ್ಪಾಣಿ ಮತಕ್ಷೇತ್ರದ ಬೋರಗಾಂವ ಪಟ್ಟಣದ 50ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಶರದ ಸಾತಪೂತೆ, ಶಿಶಿರ ಸಾತಪೂತೆ ಮುಂದಾಳತ್ವದಲ್ಲಿ ಅಕ್ಷಯ ಪವಾರ, ಅಮೋಲ ಸುತಾರ, ವಿಶಾಲ ಮೋರೆ, ರಾಹುಲ ಕುಡಚೆ, ಸೂರಜ ವಡ್ಡರ, ರಾಹುಲ ಕುಡಚೆ, ಶಂಕರ ಮಾಳಿ, ಆಕಾಶ ಪೂಜಾರಿ ಮತ್ತು ರೈತ ವರ್ಗದವರಾದ ವಿಶ್ವಾಸ ವಡ್ಡರ, ಬಾಬಾಸಾಹೇಬ ಕೋರೆ, ಕಲ್ಲಪ್ಪ ಮಹಾಜನ, ಗುಂಡು ಕೋರೆ, ದತ್ತಾತ್ರೆಯ ಮಹಾಜನ, ಚಂದ್ರಕಾಂತ ಚವ್ಹಾಣ, ಅಶೋಕ ಐಹೊಳೆ, ಬಾಬು ಹವಲೆ, ಅರ್ಜುನ ಹುಡೇದ, ಸರ್ಜಿರಾವ ವಡ್ಡರ, ಹಾಗೂ ಅವರ ತಂಡದ 50 ಕ್ಕೂ ಅಧಿಕ ಸದಸ್ಯರು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ಅವರನ್ನು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಸುನೀಲ ಪಾಟೀಲ,ಶರದ ಜಂಗಟೆ,ರಮೇಶ ಚೌಗಲೆ, ಜಯಕುಮಾರ ಖೋತ, ಬಾಳಾಸಾಹೇಬ ಪಾಟೀಲ,ದಾದಾ ಬಾದುಲೆ,ಶಿವಾಜಿ ಭೊರೆ, ಜಮಿಲ ಅತ್ತಾರ,ಬಾಬಾಸಾಹೇಬ ಚೌಗಲೆ,ನೀತೆಶ ಖೋತ,ಅರವಿಂದ ಖರಾಡೆ,ಶಾಂತಿನಾಥ ಪತ್ರೋಳೆ, ಶೇಶು ಐದಮಾಳೆ, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ