Kannada NewsKarnataka NewsLatestPolitics

*ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟ ಕಾಂಗ್ರೆಸ್*

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ನಾಳೆ ರಾಜ್ಯಕ್ಕೆ ಆಗಮಿಸುತಿದ್ದು, ಇದೇ ವೇಳೆ ರಾಜ್ಯ ಕಾಂಗ್ರೆಸ್ ಪ್ರಧಾನಿ ಮೋದಿಯವ್ರುಗೆ ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟಿದೆ.

  1. ರಾಜ್ಯದ ಜನರ ಪರವಾಗಿ ಆಡಳಿತ ಪಕ್ಷ ಕಾಂಗ್ರೆಸ್ ಕೇಳುತ್ತಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡಿ ಮೋದಿ ಎಂದು ಆಗ್ರಹಿಸಿದೆ.

ಬರ ಪರಿಹಾರಕ್ಕಾಗಿ ಸೆಪ್ಟೆಂಬರ್‌ನಲ್ಲಿ ಮನವಿ ಸಲ್ಲಿಸಲಾಗಿದೆ. ಬರ ಅಧ್ಯಯನ ತಂಡ ಅಕ್ಟೋಬರ್‌ನಲ್ಲಿ ರಾಜ್ಯಕ್ಕೆ ಭೇಟಿ ನೀಡಿದೆ. ಅದೇ ತಿಂಗಳು ಕೇಂದ್ರಕ್ಕೆ ₹17,901 ಕೋಟಿ ಪರಿಹಾರ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಷ್ಟು ದಿನ ಸುಮ್ಮನಿದ್ದಿದ್ದು ಯಾಕೆ? #AnswerMadiModi #ಉತ್ತರಕೊಡಿ ಮೋದಿ

  1. ರಾಜ್ಯದ ಬರಪೀಡಿತ ತಾಲೂಕುಗಳು 223. ಸಂಭವಿಸಿರುವ ನಷ್ಟ ₹33,770 ಕೋಟಿ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ರಾಜ್ಯ ಸರ್ಕಾರ ಕೇಳುತ್ತಿರುವುದು ₹18,177 ಕೋಟಿ ಪರಿಹಾರ.

ನಯಾಪೈಸೆ ಬಿಡುಗಡೆ ಮಾಡದೆ ಕೇಂದ್ರ ಸತಾಯಿಸುತ್ತಿರುವುದೇಕೆ?

3.ರಾಜ್ಯವು ಕಳೆದ 123 ವರ್ಷಗಳಲ್ಲಿ ಕಾಣದ ಭೀಕರ ಬರ ಎದುರಿಸುತ್ತಿದೆ. ಶೇಕಡಾ 40ರಿಂದ 90ರಷ್ಟು ಬೆಳೆ ನಷ್ಟವಾಗಿದೆ. ರೈತರಿಗೆ ಇನ್‌ಪುಟ್‌ ಸಬ್ಸಿಡಿ ನೀಡಲು ಹಣ ನೀಡುತ್ತಿಲ್ಲ ಯಾಕೆ?

  1. ನವೆಂಬರ್‌ನಲ್ಲಿ ರಾಜ್ಯ ಸಚಿವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌‌ರನ್ನು, ಡಿಸೆಂಬರ್‌ನಲ್ಲಿ ಸ್ವತಃ ಮುಖ್ಯಮಂತ್ರಿಗಳು ಗೃಹಮಂತ್ರಿಯನ್ನು ಭೇಟಿಯಾಗಿ ಬರ ಪರಿಹಾರ ಬಿಡುಗಡೆಗೆ ಒತ್ತಾಯಿಸಿದ್ದಾರೆ. ಆದರೂ ಪರಿಹಾರ ನೀಡದಿರುವುದು ಯಾರ ಮೇಲಿನ ಹಟಕ್ಕೆ?

  1. ಬರ ಪರಿಹಾರಕ್ಕೆ ಬೀದಿ ಹೋರಾಟ ಮಾಡಿದರೂ ಬಗ್ಗಲಿಲ್ಲ. ಸುಪ್ರೀಂ ಕೋರ್ಟ್‌ ಈಗ 2 ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ತಾಕೀತು ಮಾಡಿ, ಸೂಚಿಸಿದೆ. ಈಗಲಾದರೂ ಬರ ಪರಿಹಾರ ಬಿಡುಗಡೆ ಮಾಡುವಿರೋ ಅಥವಾ ದೇಶದ ಕಾನೂನನ್ನು ಧಿಕ್ಕರಿಸುವಿರೊ? #AnswerMadiModi #ಉತ್ತರಕೊಡಿ ಮೋದಿ
  1. ಕರ್ನಾಟಕ ತೆರಿಗೆ ಪಾಲನ್ನು ಶೇಕಡಾ 4.72 ರಿಂದ ಶೇಕಡಾ 3.64ಕ್ಕೆ ಇಳಿಸಿದ್ದೇಕೆ? ಇದರಿಂದ ರಾಜ್ಯಕ್ಕೆ ಆದ ₹45,000 ಕೋಟಿಗಳಿಗೂ ಹೆಚ್ಚಿನ ನಷ್ಟ ತುಂಬಿಕೊಡುವವರು ಯಾರು?
  2. ಕರ್ನಾಟಕದಿಂದ ₹4.5 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹಿಸುತ್ತಿರುವ ಕೇಂದ್ರ ಸರ್ಕಾರ, ತೆರಿಗೆ ಪಾಲಿನ ರೂಪದಲ್ಲಿ ರಾಜ್ಯಕ್ಕೆ ಕೊಡುತ್ತಿರುವುದು ₹50,000 ಕೋಟಿ ಮಾತ್ರ. ಇದು ಅನ್ಯಾಯವಲ್ಲವೆ?
  3. 2017ರಲ್ಲಿ ತೀವ್ರ ಬರದಿಂದ ರಾಜ್ಯಕ್ಕೆ ₹30,000 ಕೋಟಿ ನಷ್ಟವಾಗಿದ್ದಾಗ ಕೇಂದ್ರ ಬಿಡುಗಡೆ ಮಾಡಿದ್ದು ಕೇವಲ ₹1,435 ಕೋಟಿ. ಆದರೆ ಮಹಾರಾಷ್ಟ್ರಕ್ಕೆ ₹8,195 ಕೋಟಿ, ಗುಜರಾತಿಗೆ ₹3,894 ಕೋಟಿ ಬಿಡುಗಡೆ ಮಾಡಿತ್ತು. ಈ ತಾರತಮ್ಯ ಏಕೆ?
  4. ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸಲೆಂದೇ ರೂಪಿಸಿದ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಇನ್ನೂ ಯಾಕೆ ಅನುಮತಿ ನೀಡಲಿಲ್ಲ?
  5. 2019ರಲ್ಲಿ ಕರ್ನಾಟಕ ತೀವ್ರ ಪ್ರವಾಹ ಎದುರಿಸಿದಾಗ, ರಾಜ್ಯಕ್ಕೆ ಭೇಟಿ ನೀಡದೇ ಇದ್ದಿದ್ದು, ಕೇಳಿದಷ್ಟು ನೆರೆ ಪರಿಹಾರವನ್ನು ಬಿಡುಗಡೆ ಮಾಡದೇ ಇದ್ದಿದ್ದು ಯಾಕೆ?
  6. ಬೆಳಗಾವಿ, ಧಾರವಾಡ, ಬಾಗಲಕೋಟೆ, ಗದಗ ಜಿಲ್ಲೆಗಳಿಗೆ ಜೀವ ತುಂಬಲಿರುವ ಮಹಾದಾಯಿ ನದಿ ಯೋಜನೆಗೆ ಇದುವರೆಗೂ ಅನುಮಾತಿ ಯಾಕೆ ನೀಡಿಲ್ಲ?
  7. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಭದ್ರ ಮೇಲ್ದಂಡೆ ನೀರಾವರಿ ಯೋಜನೆಗೆ ₹5,300 ಕೋಟಿ ಘೋಷಿಸಿದ್ದ ಕೇಂದ್ರ, ವರ್ಷವಾಗುತ್ತಾ ಬಂದರೂ ಅನುದಾನ ಬಿಡುಗಡೆ ಮಾಡಿಲ್ಲ ಯಾಕೆ?
  8. ಹದಿನೈದನೆಯ ಹಣಕಾಸು ಯೋಜನೆಯ ಶಿಫಾರಸು ಮಾಡಿದ್ದರೂ ₹5,495 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿಲ್ಲ ಯಾಕೆ?
  9. ಬೆಂಗಳೂರಿನಲ್ಲಿ ಏಮ್ಸ್‌ಗೆ ಸ್ಥಾಪನೆಗೆ ಅನುಮತಿ ನೀಡಿದ್ದರೂ ಅನುದಾನ ಬಿಡುಗಡೆಯಾಗಿಲ್ಲ ಯಾಕೆ?
  10. ರಾಯಚೂರು ಮತ್ತು ಕಲಬುರಗಿಗೆ ಏಮ್ಸ್‌ ನೀಡಿಲ್ಲ ಯಾಕೆ?
  11. ಗುಜರಾತಿನ ಅಮುಲ್‌ ಉದ್ಧಾರ ಮಾಡಲು ನಮ್ಮ ಕನ್ನಡಿಗರ ಬ್ರ್ಯಾಂಡ್‌ ನಂದಿನಿಯನ್ನು ಆಪೋಶನ ತೆಗೆದುಕೊಳ್ಳಲು ಪ್ರಯತ್ನಿಸಿದ್ದು ಯಾಕೆ?
  12. ರಾಜ್ಯದಲ್ಲಿ ನೆರ ಬಂದಿದ್ದಾಗಲೂ ಬರಲಿಲ್ಲ, ಬರ ಬಂದಾಗಲೂ ಬರಲಿಲ್ಲ, ಚುನಾವಣೆ ಬಂದರೆ ಮಾತ್ರ ಓಡೋಡಿ ಬರುತ್ತೀರಲ್ಲ ಯಾಕೆ?
  13. ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೀನಿ ಎಂಬ ಮಾತನ್ನು ಉಳಿಸಿಕೊಳ್ಳಲಿಲ್ಲ ಯಾಕೆ? ನಿರುದ್ಯೋಗ ತಾಂಡವವಾಡುತ್ತಿದ್ದರೂ ಮಂದಿರ, ಮಸೀದಿಗಳತ್ತ ಕೈತೋರಿಸುತ್ತೀರಿ ಯಾಕೆ?
  14. 2018ರಲ್ಲಿ ನಮ್ಮ ರಾಜ್ಯಕ್ಕೆ ಕನ್ನಡ ಧ್ವಜದ ಮಾನ್ಯತೆ ನೀಡುವಂತೆ ಮನವಿ ಮಾಡಿದ್ದರೂ ಇದುವರೆಗೆ ಏನೂ ಹೇಳದೆ ಮೌನವಹಿಸಿರುವುದು ಯಾಕೆ?
  15. ಗೃಹ ಸಚಿವ ಅಮಿತ್‌ ಶಾ ಅವರ ಹಿಂದಿ ಹೇರಿಕೆ ವಿರೋಧಿಸಿ ಕನ್ನಡಿಗರು ಪ್ರತಿಭಟಿಸಿದರೂ ಇದುವರೆಗೆ ಏನೂ ಹೇಳದೆ ಮೌನವಹಿಸಿರುವುದು ಯಾಕೆ?
  16. ಸಂವಿಧಾನ ಬದಲಿಸುವ ಮಾತುಗಳನ್ನು ಬಿಜೆಪಿಯ ಮಂತ್ರಿಗಳು, ಸಂಸದರು, ಶಾಸಕರುಗಳೇ ಹೇಳುತ್ತಿದ್ದರೂ ಅವರ ಮಾತುಗಳನ್ನು ಖಂಡಿಸುತ್ತಿಲ್ಲವೇಕೆ? ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಯಾಕೆ?
  17. ಎರಡು ರಾಜ್ಯಗಳ ನಡುವೆ ಕಾವೇರಿ ವಿಚಾರವಾಗಿ ಸಂಘರ್ಷ ನಡೆಯುತ್ತಿದ್ದರೂ ಮಧ್ಯಸ್ಥಿಕೆ ವಹಿಸಲು ಹಿಂದೇಟು ಹಾಕಿದ್ದೇಕೆ? #AnswerMadiModi #ಉತ್ತರಕೊಡಿಮೋದಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.

Related Articles

Back to top button