Kannada NewsKarnataka NewsLatest

*6 ವರ್ಷದ ಬಾಲಕಿ ಮೇಲೆ ಕಾನ್ಸ್ ಟೇಬಲ್ ನಿಂದ ಲೈಂಗಿಕ ದೌರ್ಜನ್ಯ*

ಪ್ರಗತಿವಾಹಿನಿ ಸುದ್ದಿ: ಆರಕ್ಷಕನೇ ಭಕ್ಷಕನಾದ ಘಟನೆ ಇದು. 6 ವರ್ಷದ ಪುಟ್ಟ ಬಾಲಕಿ ಮೇಲೆ ಕಾನ್ಸ್ ಟೆಬಲ್ ಓರ್ವ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ನಡೆದಿದೆ.

ಹುಬ್ಬಳ್ಳಿಯ ಹುಬ್ಬಳ್ಳಿಯ ಘಂಟಿಕೇರಿ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಹಜರತ್ ಮಿಟ್ಟೇಖಾನ್ ವಿರುದ್ಧ ಬಾಲಕಿಯ ತಂದೆ ಗಂಭೀರ ಆರೋಪ ಮಾಡಿದ್ದು, ಪೋಕ್ಸೋ ಕೇಸ್ ದಾಖಲಾಗಿದೆ.

ಪ್ರಕರಣವೊಂದರ ದೂರು ನೀಡಲು ಹೋಗಿದ್ದ ವೇಳೆ ತನ್ನ ಪತ್ನಿಯ ಪರಿಚಯ ಮಾಡಿಕೊಂಡಿದ್ದ ಕಾನ್ಸ್ ಟೇಬಲ್ ಹಜರತ್, ಬಳಿಕ ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈ ವೇಳೆ ತನ್ನ ಮಗಳ ಜೊತೆ ಅಶ್ಲೀಲವಾಗಿ ವರ್ತಿಸಿ ದೌರ್ಜನ್ಯವೆಸಗಿದ್ದಾನೆ ಎಂದು ಬಾಲಕಿ ತಂದೆ ಆರೋಪಿಸಿದ್ದಾರೆ.

ಕಾನ್ಸ್ ಟೇಬಲ್ ಹಜರತ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾನ್ಸ್ ಟೇಬಲ್ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button