ಕೆಎಲ್ ಇ ಸಂಸ್ಥೆಯಿಂದ 250 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ
ಕೆಎಲ್ ಇ ಸಂಸ್ಥೆಯಿಂದ 250 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಈ ಭಾಗದ ಬಡ ಜನರಿಗೂ ಬೆಳಗಾವಿಯಲ್ಲಿಯೇ ಕ್ಯಾನ್ಸರ್ ಕಾಯಿಲೆಗೆ ಉತ್ತಮ ಚಿಕಿತ್ಸೆ ದೊರೆಯಬೇಕು ಎಂಬ ಉದ್ದೇಶದಿಂದ ಕೆಎಲ್‍ಇ ಸಂಸ್ಥೆ 250 ಕೋಟಿ ವೆಚ್ಚದಲ್ಲಿ ಬೆಳಗಾವಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡುತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ತಾಲೂಕಿನ ಅಂಕಲಿಯ ಶಿವಾನುಭವ ಮಂಟಪದಲ್ಲಿ ಗುರುವಾರ ರಾಜ್ಯ ಸಭಾ ಸದಸ್ಯ ಡಾ. ಪ್ರಭಾಕರ ಕೋರೆಯವರ 72ನೇ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಉಚಿತ ಬೃಹತ್ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಕೃಷಿ ಪ್ರಶಸ್ತಿ ವಿತರಣೆ ಹಾಗೂ ಕ್ರೀಡಾ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಂಬಾಕು ಸೇವನೆಯಿಂದ ಕ್ಯಾನ್ಸರ್ ಬರುತ್ತಿದ್ದು, ಕ್ಯಾನ್ಸರ್ ರೋಗ ಬಾರದಂತೆ ಜಾಗೃತಿ ವಹಿಸಬೇಕಾಗಿದೆ. ಆದ್ದರಿಂದ ಯುವ ಜನಾಂಗ ತಂಬಾಕು ಸೇವನೆಯಂತಹ ದುಶ್ಚಟಗಳಿಂದ ದೂರವಿದ್ದು, ಆರೋಗ್ಯವಂತ ಸಮಾಜ ನಿರ್ಮಾಣದ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಮುಂಬೈ ಮತ್ತು ಬೆಂಗಳೂರು ಪಟ್ಟಣ ಪ್ರದೇಶಗಳಲ್ಲಿ ದೊರೆಯುವ ಉನ್ನತ ಶಿಕ್ಷಣ ಹಳ್ಳಿಯಲ್ಲಿಯೇ ಹಳ್ಳಿಯ ರೈತರ ಮಕ್ಕಳಿಗೂ ದೊರೆಯುವಂತೆ ಮಾಡಿರುವ ಕೀರ್ತಿ ಡಾ. ಪ್ರಭಾಕರ ಕೋರೆಯವರಿಗೆ ಸಲ್ಲುತ್ತದೆ ಎಂದರು.
ಶ್ರೀಶೈಲಪೀಠದ ಶ್ರೀಶೈಲ ಸೂರ್ಯಸಿಂಹಾಸನಾಧೀಶ್ವರ 1008 ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಆರೋಗ್ಯ ಸಮಾಜ ನಿರ್ಮಾಣವಾಗಬೇಕು ಎಂಬ ಕನಸು ಕಂಡಿರುವ ಡಾ. ಪ್ರಭಾಕರ ಕೋರೆಯವರು ಕೆಎಲ್‍ಇ ಆಸ್ಪತ್ರೆಯನ್ನು ಬೆಳೆಸುವ ಮುಖಾಂತರ ಜನರಿಗೆ ಉತ್ತಮ ಆರೋಗ್ಯ ದೊರೆಯುವಂತೆ ಮಾಡಿದ್ದು, ಇದೀಗ ಬೆಳಗಾವಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡುತ್ತಿರುವುದರಿಂದಲೇ ಗೊತ್ತಾಗುತ್ತದೆ. ಆರೋಗ್ಯದ ಬಗ್ಗೆ ಇರುವ ಕಾಳಜಿ ಎಂದರು.
ಶಾಸಕ ದುರ್ಯೋಧನ ಐಹೋಳೆ, ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಅಮೀತ ಕೋರೆ ಮಾತನಾಡಿದರು.
ಮಾಜಿ ಸಚಿವ ಶಶಿಕಾಂತ ನಾಯಿಕ, ಮಾರುತಿ ಅಷ್ಟಗಿ, ಡಾ.ಎಂ.ವಿ.ಜಾಲಿ, ಡಾ. ವಿ.ಎ.ಸಾವೊಜಿ, ಡಿ.ಎಸ್.ಕರೋಶಿ, ಪ್ರೀತಿ ದೊಡವಾಡ ಮಾತನಾಡಿದರು. ಚಿಕ್ಕೋಡಿಯ ಸಂಪಾದನಾ ಮಹಾಸ್ವಾಮಿಗಳು, ಪರಮಾನಂದವಾಡಿಯ ಡಾ. ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ಸಾನೀಧ್ಯ ವಹಿಸಿ ಮಾತನಾಡಿದರು.ಡಾ. ವಿ.ಡಿ.ಪಾಟೀಲ, ಡಾ. ಎನ್.ಎಸ್.ಮಹಾಂತಶೆಟ್ಟಿ, ಮಲ್ಲಿಕಾರ್ಜುನ ಕೋರೆ, ತುಕಾರಾಮ ಪಾಟೀಲ, ಚೇತನ ಪಾಟೀಲ, ತಾತ್ಯಾಸಾಬ ಕಾಟೆ, ಅಜೀತ ದೇಸಾಯಿ, ಸಂದೀಪ ಪಾಟೀಲ, ಶಿವಾನಂದ ಹಕಾರೆ, ಡಾ. ಪ್ರಸಾದ ರಾಂಪೂರೆ, ಸಂದೀಪ ಕ್ಯಾತನವರ, ಪಿಂಟು ಹಿರೇಕುರುಬರ, ಆನಂದ ಕೊಟಬಾಗಿ, ವಿವೇಕ ಕಮತೆ, ಭಾರತಿ ಪಾಟೀಲ, ಮಹಾಂತೇಶ ಪಾಟೀಲ, ಮಹೇಶ ಭಾತೆ ಮುಂತಾದವರು ಉಪಸ್ಥಿತರಿದ್ದರು////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ