ಪ್ರಗತಿವಾಹಿನಿ ಸುದ್ದಿ, ಭೋಜ (ನಿಪ್ಪಾಣಿ) – ನಿಪ್ಪಾಣಿ ಮತಕ್ಷೇತ್ರದ ಭೋಜ ಪಟ್ಟಣದಲ್ಲಿ ’ಮುನಿ ನಿವಾಸ’ ನಿರ್ಮಾಣಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಚಾಲನೆ ನೀಡಿದರು.
ನಿಪ್ಪಾಣಿ ಮತಕ್ಷೇತ್ರದ ಭೋಜ ಗ್ರಾಮದಲ್ಲಿ ಶಾಂತಿ ಸಾಗರ ಪುರಂ ಪ್ರದೇಶದಲ್ಲಿ ಸುಮಾರು ೨ ಕೋಟಿ ೧೮ ಲಕ್ಷ ರೂ ಗಳ ಮೊತ್ತದಲ್ಲಿ ’ಮುನಿ ನಿವಾಸ’ ನಿರ್ಮಾಣಕ್ಕೆ ತಪೋಭೂಮಿ ಪ್ರಣೇತಾ ಶ್ರೀ ೧೦೮ ಪ್ರಜ್ಞಸಾಗರ ಮುನಿ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಚಾಲನೆ ನೀಡಲಾಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಭೂಮಿ ಪೂಜೆ ನೇರವೇರಿಸಿದರು.
ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ಇಂದು ಕೋಟ್ಯಾಂತರ ಹಿಂದುಗಳ ಆರಾದ್ಯ ದೈವ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರುವ ಈ ಶುಭದಿನದನವೇ ಮುನಿ ನಿವಾಸ ನಿರ್ಮಾಣಕ್ಕೆ ಚಾಲನೆ ನೀಡಬೇಕು ಎಂದು ಮುನಿಯವರು ನಿಶ್ಚಯ ಮಾಡಿದ್ದದರಿಂದ ಇಂದು ’ಮುನಿ ನಿವಾಸ’ ಕ್ಕೆ ಚಾಲನೆ ನೀಡಲಾಯಿತು. ಈ ಪುಣ್ಯ ಕ್ಷೇತ್ರದ ಅಭಿವ್ರದ್ದಿಗೆ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ದಿ ಕಾರ್ಯಗಳಿಗೆ ಕೈ ಜೋಡಿಸುವ ಗುರಿ ಹೊಂದಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅಪ್ಪಾಸಾಬ ಪಾಟೀಲ, ತಾತ್ಯಾಸಾಬ ಪಾಟೀಲ, ರಣಜೀತ ಚೌಗುಲೆ, ಪ್ರಶಾಂತ ಪಾಟೀಲ, ಭರತೇಶಶ ಕುಪ್ಪಾನಟ್ಟೆ, ಆದನಗಡ ಪಾಟೀಲ, ಅಪ್ಪಾಸಾಬ ಕೆಸ್ತೆ, ಅಜಯ ಚಗುಲೆ, ಸುಹಾಸ ಮಮಮದಾಪುರೆ, ಪ್ರಶಾಂತ ಕುಪ್ಪಾನಟ್ಟೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ