Belagavi NewsBelgaum NewsKannada NewsKarnataka News

ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದುವರೆದ ಮಳೆ: ರೆಡ್​ ಅಲರ್ಟ್​ ಘೋಷಣೆ

ಪ್ರಗತಿವಾಹಿನಿ ಸುದ್ದಿ: ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆ ಮುಂದುವರೆದಿದೆ.  ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಿಸಲಾಗಿದ್ದು ಮಳೆ ಹೆಚ್ಚಲಿದೆ.

ಮೈಸೂರು, ಹಾಸನ, ಯಾದಗಿರಿ, ರಾಯಚೂರು, ಕಲಬುರಗಿ, ಬೀದರ್​, ಬೆಳಗಾವಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದ್ದು ಮಳೆ ವಿಪರೀತವಾಗಲಿದೆ. ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ,ಕೋಲಾರ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಕೂಡ ಭಾರಿ ಮಳೆಯಾಗಲಿದೆ ಎಂದು ಹವಾಮಾಮ ಇಲಾಖೆಯ ವರದಿ ತಿಳಿಸಿದೆ.‌

ಗೋಕರ್ಣ, ಕುಂದಾಪುರ, ಮಂಕಿ, ಲಿಂಗನಮಕ್ಕಿ, ಸಿದ್ದಾಪುರ, ಹೊನ್ನಾವರ, ಕೊಲ್ಲೂರು, ಕೊಟ್ಟಿಗೆಹಾರ, ಭಾಗಮಂಡಲ, ಕೊಪ್ಪ, ಶೃಂಗೇರಿ, ಕುಮಟಾ, ಸಿದ್ದಾಪುರ, ಕ್ಯಾಸಲ್​ರಾಕ್, ಚಿಕ್ಕಮಗಳೂರು, ಕಮ್ಮರಡಿ, ಶಿರಾಲಿ, ಕದ್ರಾದಲ್ಲಿ ಹೆಚ್ಚಿನ ಮಳೆ ಸುರಿದಿದೆ. ಹುಂಚದಕಟ್ಟೆ, ಕಳಸ, ಉಡುಪಿ, ಸೋಮವಾರಪೇಟೆ, ಕಾರ್ಕಳ, ತ್ಯಾಗರ್ತಿ, ಎನ್​ಆರ್​ಪುರ, ಮೂರ್ನಾಡು, ಬನವಾಸಿ, ಯಲ್ಲಾಪುರ, ಧರ್ಮಸ್ಥಳ, ಪುತ್ತೂರು, ಮೂಡಿಗೆರೆ, ಉಪ್ಪಿನಂಗಡಿ, ಸುಳ್ಯ, ಮಾಣಿ, ಇಳಕಲ್, ದೇವದುರ್ಗ, ನಾಪೊಕ್ಲುವಿನಲ್ಲಿ ಮಳೆಯಾಗಿದೆ.

ಬೆಳ್ತಂಗಡಿ, ಆನವಟ್ಟಿ, ಪೊನ್ನಂಪೇಟೆ, ಜೋಯಿಡಾ, ಪಣಂಬೂರು, ಗಬ್ಬೂರು, ವಿರಾಜಪೇಟೆ, ಬೇಲೂರು, ಹೊನ್ನಾಳಿ, ಭದ್ರಾವತಿ, ತರೀಕೆರೆ, ಕಿರವತ್ತಿ, ಹಾರಂಗಿ, ಮುಂಡಗೋಡು, ಸೇಡಂ, ಚಿಂಚೋಳಿ, ಇಂಡಿ, ಅರಕಲಗೂಡು, ಹಾಸನ, ಹೊಸದುರ್ಗ, ಚನ್ನಗಿರಿ, ಭಾಲ್ಕಿ, ಕಡೂರು, ರಾಣೆಬೆನ್ನೂರು, ಕಲಬುರಗಿ, ಕಮಲಾಪುರ, ಮುದಗಲ್, ಗುಂಡ್ಲುಪೇಟೆ, ಕೊಳ್ಳೇಗಾಲದಲ್ಲಿ ಮಳೆಯಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button