*ಸಂವಿಧಾನದ ಸಾರವನ್ನು ಯುವಜನತೆಗೆ ತಲುಪಿಸಿ: ಪೂರ್ಣಾನಂದ ಶ್ರೀ*
ಪ್ರಗತಿವಾಹಿನಿ ಸುದ್ದಿ: ಸಂವಿಧಾನದ ಸಾರವನ್ನು ಯುವಜನತೆಗೆ ತಲುಪಿಸಲು ವಿಶೇಷ ಉಪನ್ಯಾಸಗಳು ಮತ್ತು ಚರ್ಚಾಸಭೆಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಇಂಚಲ ಶಿವಯೋಗೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪೂಜ್ಯ ಪೂರ್ಣಾನಂದ ಸ್ವಾಮೀಜಿಗಳು ಹೇಳಿದರು.
ಸಮೀಪದ ಇಂಚಲದ ಆಯುರ್ವೇದ ಕಾಲೇಜು ಸಭಾಭವನದಲ್ಲಿ ಸಂಸ್ಥೆಯ ಆಡಳಿತ ಮಂಡಳಿ, ಅದಿವ್ಯಕ್ತ ಪರಿಷತ್, ಬೈಲಹೊಂಗಲ ಬಾರ್ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ನಡೆದ ಸಂವಿಧಾನ ದಿನಾಚರಣೆ ಸಭೆಯಲ್ಲಿ ಮಾತನಾಡಿ,ಭಾರತ ರತ್ನ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕನಸುಗಳು ಮತ್ತು ಭಾರತೀಯ ಸಂವಿಧಾನದ ತತ್ವಗಳಲ್ಲಿ ಅಡಗಿರುವ ಸಮಾನತೆಯ ತತ್ವವನ್ನು ಬಲಪಡಿಸಬೇಕು. ಅದರಲ್ಲಿರುವ ಸಾರವನ್ನು ತಿಳಿದು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಅವರ ತಂಡ 2 ವರ್ಷ, 11 ತಿಂಗಳು, 18 ದಿನಗಳಲ್ಲಿ ಸಂವಿಧಾನ ರಚನೆ ಪೂರ್ಣಗೊಂಡಿತು. ಇದರ ಕರಡು ಪ್ರತಿಯನ್ನು 1949 ನವೆಂಬರ್ 26 ರಂದು ಭಾರತದಲ್ಲಿ ಅಳವಡಿಸಿಕೊಳ್ಳಲಾಯಿತು.
1950 ಜನೆವರಿ 26ರಂದು ಜಾರಿ ಮಾಡಲಾಯಿತು. ದೇಶದ ಜನತೆಯ ನೆಮ್ಮದಿಗಾಗಿ ಎಲ್ಲರಿಗೂ ಮೂಲಭೂತ ಹಕ್ಕುಗಳನ್ನು ನೀಡಿದೆ. ಭಾರತದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿಬಿಂಬಿಸುವ ಈ ಹಕ್ಕುಗಳು ಪ್ರತಿ ವ್ಯಕ್ತಿಯ ಮಾನವೀಯ ಗೌರವ, ಸ್ವಾತಂತ್ರ್ಯ, ಸಮಾನತೆ, ಮತ್ತು ಬೋಧನೆಗಳನ್ನು ರಕ್ಷಿಸಲು ಸಂವಿಧಾನದಲ್ಲಿ ಅಡಕವಾಗಿವೆ.
ಸಂವಿಧಾನದ ಭಾಗ 3ರಲ್ಲಿ ಪ್ರಜಾಪ್ರಭುತ್ವದ ಪ್ರಮುಖ ತತ್ವಗಳಾದ ಸಮಾನತೆಯನ್ನು ಖಾತ್ರಿಗೊಳಿಸುವ ಹಕ್ಕು. ಸ್ವಾತಂತ್ರ್ಯದ ಹಕ್ಕು, ಶೋಷಣೆಯಿಂದ ಮುಕ್ತಿ ಹಕ್ಕು ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು, ನ್ಯಾಯಮೂಲಕ ಪರಿಹಾರದ ಹಕ್ಕುಗಳನ್ನು ನೀಡಿ ಪ್ರಜಾಪ್ರಭುತ್ವವನ್ನು ಪ್ರಬಲಗೊಳಿಸುವ ಕಂಕಣವಾಗಿವೆ ಎಂದರು.
ನ್ಯಾಯವಾದಿ ಎಸ್.ಎಸ್. ಆಲದಕಟ್ಟಿ ಮಾತನಾಡಿ, ಮೊಟರ್ ಅಪಘಾತಗಳ ತಿವ್ರತೆಯ ಬಗ್ಗೆ ಮಾತನಾಡಿ ಜಾಗೃತಿ ಮೂಡಿಸಿದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಮ್.ಆರ್.ಮೆಳವೆಂಕಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆಯ ಪ್ಅಣ ವಚನ ಬೊದಿಸಿದರು.
ಕಾರ್ಯಕ್ರಮದ ಬಗ್ಗೆ ಕಿರು ಪ್ರಶ್ನಾವಳಿ ಏರ್ಪಡಿಸಿ ಬಹುಮಾನ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾ.ಡಾ. ವಿನಯ ಮೊಹನ, ಉಪ ಪ್ರಾಚಾರ್ಯ ಡಾ.ಗಮಗಾಧರ ಹಾದಿಮನಿ, ನ್ಯಾಯವಾದಿಗಳಾದ ಎಸ್.ವಿ.ಸಿದ್ದಮನಿ, ಎಸ್.ವಾಯ್.ಪಾಟೀಲ, ಅದೃಶ್ಯ ಸಿದ್ರಾಮನಿ, ಸಿ.ಎಸ್.ಚಿಕನಗೌಡರ, ಎಮ್.ಎಮ್.ಅಬ್ಬಾಯಿ, ಸಿದ್ದಲಿಂಗ ಬೊಳಶೆಟ್ಟಿ, ಉಮಾ ಬುಲಾಕೆ, ಜಯಶ್ರೀ ಚಿಕ್ಕಮಠ, ಸುಜಾತಾ ಆಲದಕಟ್ಟಿ, ಶಾಂತಕ್ಕ ಸಿದ್ರಾಮಣ್ಣವರ, ಡಾ.ಮಹೇಶ ಪಾಟೀಲ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ