ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬಾಲ್ಯ ವಿವಾಹ ಒಂದು ಅನಿಷ್ಟ ಪದ್ಧತಿಯಾಗಿದ್ದು ಇದನ್ನು ತಡೆಗಟ್ಟಲು ಎಲ್ಲರೂ ಸಹಕರಿಸಬೇಕೆಂದು ಅಂಗನವಾಡಿ ಮೇಲ್ವಿಚಾರಕಿ ಎಲ್.ಬಿ. ಕುರಿ ಮನವಿ ಮಾಡಿದರು.
ನಗರದ ರುಕ್ಮಿಣಿ ನಗರ ಕಾವಲು ಸಮಿತಿ ವತಿಯಿಂದ ಶುಕ್ರವಾರ ವಿವಿಧ ಸಂಘ ಸಂಸ್ಥೆಗಳ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಬಾಲ್ಯ ವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಲ್ಯ ವಿವಾಹ, ಅಕ್ರಮ ಮಹಿಳಾ ಸಾಗಾಣಿಕೆ, ಅಪ್ರಾಪ್ತ ಬಾಲಕಿಯರ ಮೇಲಿನ ದೌರ್ಜನ್ಯಗಳು ಸೇರಿದಂತೆ ಎಲ್ಲ ರೀತಿಯ ಮಹಿಳಾ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ಸಮುದಾಯದ ಪಾತ್ರ ಮುಖ್ಯವಾಗಿದೆ. ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ಅವರು ತಿಳಿಸಿದರು.
ಆರೋಗ್ಯ ಇಲಾಖೆಯ ಸಿಬ್ಬಂದಿ ಮಲ್ಲಮ್ಮ ತಾಳಿಕೋಟೆ, ಅಪ್ರಾಪ್ತರ ಮದುವೆಯಿಂದಾಗುವ ದುಷ್ಪರಿಣಾಮಗಳ ಕುರಿತು ವಿವರಿಸಿದರು.
ಗೋಪಾಲ ಖಟಾವಕರ ಮಾತನಾಡಿ, ಬಾಲ್ಯ ವಿವಾಹ ಸೇರಿದಂತೆ ವಿವಿಧ ದೌರ್ಜನ್ಯ ತಡೆಗಟ್ಟುವಲ್ಲಿ ತಾಯಂದಿರ ಪಾತ್ರ ಪ್ರಮುಖವಾಗಿದೆ ಎಂದರು.
ನೀಲಾ ನಾಗೂರ, ಆರೋಗ್ಯ ಇಲಾಖೆ ಸಿಬ್ಬಂದಿ ಕಸ್ತೂರಿ ಮುರಗಯ್ಯನವರ, ಆಯೇಶಾ ಚೌಧರಿ, ಅಂಗನವಾಡಿ ಕಾರ್ಯಕರ್ತೆಯರಾದ ರೇಣುಕಾ ಖಟಾವಕರ, ಮಂಜುಳಾ ಬಿರ್ಜೆ, ಸಾವಿತ್ರಿ ದುಲ್ಲಂಗೆ, ರೇಖಾ ಗುರವ, ತಂಜಿಲ್ಲಾ ಸೊಲ್ಲಾಪೂರೆ, ಶಶಿಕಲಾ ಹಿರೇಮಠ, ಸುರೇಖಾ ದುರ್ಗಣ್ಣವರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಸುಮಲತಾ ಚವಲಗಿ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ