Kannada NewsKarnataka NewsLatest

ಕೊರೋನಾ ಎಫೆಕ್ಟ್: ರಾಯಬಾಗದಲ್ಲಿ ಲಕ್ಷಾಂತರ ರೂ. ಕಲ್ಲಂಗಡಿ ನಾಶ

https://youtu.be/fpUPE9vPqYE

 

https://youtu.be/kFgBF1ACIn4

https://youtu.be/Z1_Y4DV811s

https://youtu.be/poO1On546lI

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಕೊರೋನಾದಿಂದಾಗಿ ಮಾರುಕಟ್ಟೆಯಿಲ್ಲದೆ ರೈತರು ಬೆಳೆದ ಬೆಳಗಳನ್ನೆಲ್ಲ ಹೊಲದಲ್ಲೇ ನಾಶಮಾಡುವ ಸ್ಥಿತಿ ಉಂಟಾಗಿದೆ.
 ರಾಯಬಾಗ ತಾಲೂಕಿನ ಖೆಮಲಾಪುರ ಗ್ರಾಮದಲ್ಲಿ  ಸುಮಾರು 10 ಲಕ್ಷ ರೂ. ಮೌಲ್ಯದ ಕಲ್ಲಂಗಡಿ ಹಣ್ಣನ್ನು ಮಾರುಕಟ್ಟೆಗೆ ಸಾಗಿಸಲಾಗದೆ ನಾಶಪಡಿಸಲಾಗಿದೆ.
ಸಿದ್ದೇಶ್ವರ ಸನದಿ ಎಂಬಾತ ಯುವ ರೈತ ಕಲ್ಲಂಗಡಿ ಬೆಳೆದಿದ್ದರು. ಮಾರ್ಕೆಟ್ ಸಂಪೂರ್ಣ ಸ್ಥಬ್ಧವಾಗಿದ್ದರಿಂದ 2.5 ಎಕರೆ ಜಮೀನಿನಲ್ಲಿನ ಕಲ್ಲಂಗಡಿ ಬೆಳೆಯನ್ನು ನಾಶಪಡಿಸಿದ್ದಾರೆ.
40 ಟನ್ ಕಲ್ಲಂಗಡಿಗಳನ್ನು ಊರಿಗೆಲ್ಲ ಉಚಿತವಾಗಿ ಹಂಚಿದ್ದಾರೆ. ಇನ್ನೂ 30 ಟನ್ ಕಲ್ಲಂಗಡಿ ಜಮೀನಿನಲ್ಲಿ ಉಳಿದಿದೆ.
 ನೌಕರಿ ಬಿಟ್ಟು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಸಿದ್ದೇಶ್ವರ ಅವರಿಗೆ ಇದು ಬಿಗ್ ಶಾಕ್ ನೀಡಿದೆ.
 ಕೃಷಿ ಯಲ್ಲೆ ಏನಾದರೂ ಸಾಧಿಸಬೇಕೆಂದು ಲಕ್ಷಾಂತರ ರೂ ಸಾಲ  ಮಾಡಿ ತನ್ನ ಮೂರು ಎಕರೆಯಲ್ಲಿ ಕಲ್ಲಂಗಡಿ ಹಾಗೂ ಎರಡು ಎಕರೆ ಕುಂಬಳಕಾಯಿ ಹಾಗೂ ಹಿರೆಕಾಯಿ ಬೆಳೆ ಬೆಳೆದಿದ್ದಾರೆ.  ಕಲ್ಲಂಗಡಿ ಬೆಳೆ ಫಲವತ್ತಾಗಿ ಬೆಳೆದು ಸುಮಾರು 80 -90 ಟನ್ ಕಾಯಿ ಬಂದಿದೆ. ಕೊರೊನಾ ಎಫೆಕ್ಟ್ ನಿಂದ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಸಾಗಾಟ ಮತ್ತು ಮಾರುಕಟ್ಟೆ ಇಲ್ಲದೆ ರೈತ ಕಂಗಾಲಾಗಿದ್ದಾನೆ.
ಹಣ್ಣು ನಾಶ ವಾಗಬಾರದೆಂದು ಸುತ್ತ ಮುತ್ತ ಗ್ರಾಮಸ್ಥರಿಗೆ ಉಚಿವಾಗಿ ಕೊಟ್ಟಿದ್ದಾರೆ. ಅಲ್ಲದೆ   ಉಳಿದ ಸುಮಾರು 40-50 ಟನ್ ಹಣ್ಣನ್ನು ನೆಲಕ್ಕೆ ಎಸೆದು ಒಡೆದು ನಾಶ ಪಡಿಸುತ್ತಿದ್ದಾರೆ. 10-12 ಲಕ್ಷ ರೂಪಾಯಿ ನಷ್ಟ ಅನುಭವಿಸಿದ್ದಾರೆ.
 ಸರಕಾರವೇ ಹೊಲಕ್ಕೆ ಬಂದು ಖರೀದಿಸುವ ವ್ಯವಸ್ಥೆಯಾಗಬೇಕು. ನಾಶವಾದ ಬೆಳೆಗೆ ಪರಿಹಾರ ನೀಡಬೇಕು ಎನ್ನುವುದು ರೈತರ ಆಗ್ರಹವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button