Kannada NewsKarnataka NewsLatest

ಬೆಳಗಾವಿಯಲ್ಲಿ ಮತ್ತಿಬ್ಬರಿಗೆ ಕೊರೋನಾ: 10ಕ್ಕೇರಿತು ಸೋಂಕಿತರ ಸಂಖ್ಯೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಳಗಾವಿಯಲ್ಲಿ ಇಂದು ಒಟ್ಟೂ ಮೂವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 10ಕ್ಕೇರಿದೆ.

ಹಿರೇಬಾಗೇವಾಡಿಯ ಸೋಂಕಿತ (ನಂ.128)ನ ತಂದೆಗೆ ಸೋಂಕು ತಗುಲಿದ್ದು ಇಂದು ಬೆಳಗ್ಗೆ ಪತ್ತೆಯಾಗಿತ್ತು, ಇದೀಗ ಆತನ 40 ವರ್ಷದ ತಾಯಿ ಮತ್ತು 22 ವರ್ಷದ ಸಹೋದರನಿಗೂ ಸೋಂಕು ಇರುವುದು ದೃಢಪಟ್ಟಿದೆ. ಇವರೆಲ್ಲರನ್ನೂ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Home add -Advt

ಇದರೊಂದಿಗ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 197ಕ್ಕೇರಿದೆ.

ಬೆಳಗಾವಿಯಲ್ಲಿ ಮತ್ತೊಂದು ಕೊರೋನಾ ಸೋಂಕು; ಬಾಗಲಕೋಟೆಯಲ್ಲಿ ಮೂವರು ಮಕ್ಕಳಿಗೆ ಸೋಂಕು

Related Articles

Back to top button