Latest

ಗೊಂದಲದ ಬುಲಿಟಿನ್: ಬೆಳಗಾವಿಯಲ್ಲಿ 12, ರಾಜ್ಯದಲ್ಲಿ 267 ಜನರಿಗೆ ಕೊರೋನಾ ಸೋಂಕು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯ ಆರೋಗ್ಯ ಇಲಾಖೆ ಇಂದು ಬಿಡುಗಡೆ ಮಾಡಿರುವ ಬುಲಿಟಿನ್ ನಲ್ಲಿ ರಾಜ್ಯದಲ್ಲಿ 267 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದೆ.

ಇದರಿಂದಾಗಿ ಕರ್ನಾಟಕದಲ್ಲಿ ಒಟ್ಟೂ 4063 ಜನರಿಗೆ ಸೋಂಕು ತಗುಲಿದಂತಾಗಿದೆ.

Home add -Advt

ಇದರಲ್ಲಿ ಕಲಬುರಗಿಯಲ್ಲಿ 105, ಉಡುಪಿಯಲ್ಲಿ 62, ರಾಯಚೂರಿನಲ್ಲಿ 35, ಬೆಂಗಳೂರು ನಗರದಲ್ಲಿ 20 ಜನರಿಗೆ ಸೋಂಕು ತಗುಲಿರುವುದಾಗಿ ತಿಳಿಸಲಾಗಿದೆ. ಬೆಳಗಾವಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಆದರೆ ಬೆಳಗಾವಿ ಜಿಲ್ಲಾ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯಲ್ಲಿ ಬೆಳಗಾವಿ ತಾಲೂಕಿನಲ್ಲಿ ಇಂದು 12 ಜನರಿಗೆ ಕೊರೋನಾ ಸೋಂಕು ತಗುಲಿರುವುದಾಗಿ ತಿಳಿಸಲಾಗಿದೆ.

ಇಂದು ಸೋಂಕು ಪತ್ತೆಯಾದ 267 ಜನರ ಪೈಕಿ 34 ಜನರನ್ನು ಹೊರತುಪಡಿಸಿದರೆ ಉಳಿದವರೆಲ್ಲ ಮಹಾರಾಷ್ಟ್ರದಿಂದ ಹಿಂತಿರುಗಿದವರೇ ಆಗಿದ್ದಾರೆ.

Related Articles

Back to top button