Latest

ಕೊರೊನಾ ಸೋಂಕಿತ ಮಹಿಳೆಗೆ ವೈದ್ಯನಿಂದಲೇ ಲೈಂಗಿಕ ಕಿರುಕುಳ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಸೋಂಕಿತ ಮಹಿಳೆಗೆ ವೈದ್ಯನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಅಮಾನುಷ ಘಟನೆ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ನಡೆದಿದೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಂಕಿತ ಮಹಿಳೆಗೆ ವೈದ್ಯರೊಬ್ಬರು ಈ ಕೃತ್ಯವೆಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಟ್ರಾಮಾ ಕೇರ್ ಸೆಂಟರ್ ಕೋವಿಡ್ 19 ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತೆಗೆ ಜುಲೈ 25 ರ ರಾತ್ರಿ 10 ಗಂಟೆಗೆ ಅಪರಿಚಿತ ವೈದ್ಯ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವಿಚಾರವನ್ನು ಮಹಿಳೆ ಟ್ರಾಮಾ ಕೇರ್‌ ಸೆಂಟರ್‌ನ ನೋಡಲ್‌ ಅಧಿಕಾರಿ ಅಸಿಮಾ ಬಾನು ಅವರಿಗೆ ತಿಳಿಸಿದ್ದಾರೆ.

ಇದೀಗ ಈ ಘಟನೆ ಬಗ್ಗೆ ಸಂತ್ರಸ್ತ ಸೋಂಕಿತ ಮಹಿಳೆ ವಿಕ್ಟೋರಿಯಾ ಆಸ್ಪತ್ರೆ ಮುಖ್ಯಸ್ಥ ಡಾ.ಬಾಲಾಜಿ ಪೈ ಅವರಲ್ಲಿ ದೂರು ನೀಡಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಬಾಲಾಜಿ ಪೈ ವಿವಿ ಪುರಂ ಠಾಣೆಗೆ ದೂರು ನೀಡಿದ್ದು, ಅಪರಿಚಿತ ವೈದ್ಯನ ವಿರುದ್ಧ ಐಪಿಸಿ ಸೆಕ್ಷನ್‌ 354(ಲೈಂಗಿಕ ಕಿರುಕುಳ) ರ ಅಡಿ ಪ್ರಕರಣ ದಾಖಲಿಸಲಾಗಿದೆ.

Home add -Advt

Related Articles

Back to top button