Latest

ಕೊರೊನಾ ಬಂದ ಅಣ್ಣನನ್ನೇ ಕೊಚ್ಚಿ ಕೊಂದ ತಮ್ಮ

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಕೊರೊನಾ ಸೋಂಕು ಬಂದಿದ್ದ ಅಣ್ಣನನ್ನೇ ತಮ್ಮನೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸಾ ತಾಲೂಕಿನ ಮಸರಣಿಗೆ ಗ್ರಾಮದಲ್ಲಿ ನಡೆದಿದೆ.

ಮಹಾವೀರ ಹತ್ಯೆಯಾದ ಸೋಂಕಿತ. ಕೆಲದಿನಗಳಿಂದ ಮಹಾವೀರ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗಳು ಇರಲು ಸಾಧ್ಯವೇ ಇಲ್ಲ ಎಂದು ಹಟಹಿಡಿದ ಮಹಾವೀರ ತನ್ನನ್ನು ಡಿಸ್ಚಾರ್ಜ್ ಮಾಡುವಂತೆ ಒತ್ತಾಯಿಸಿದ್ದಾನೆ. ಅಲ್ಲದೇ ಡಿಸ್ಚಾರ್ಜ್ ಅಗಿ ಮನೆಗೆ ಬಂದಿದ್ದಾನೆ.

ಸೋಂಕು ಕಡಿಮೆಯಾಗದಿದ್ದರೂ ಆಸ್ಪತ್ರೆಯಿಂದ ಮನೆಗೆ ಬಂದ ಅಣ್ಣನ ನಡೆಗೆ ತಮ್ಮನಿಗೆ ಕೋಪ ನೆತ್ತಿಗೇರಿದೆ. ಇಬ್ಬರ ನಡುವೆ ಜಗಳ ಆರಂಭವಾಗಿ ತಮ್ಮ ತನ್ನ ಅಣ್ಣ ಮಹಾವೀರನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ತೌಕ್ತೆ ಆರ್ಭಟಕ್ಕೆ ಸಾಂಬ್ರಾದಲ್ಲಿ ವಿಮಾನ ಹಾರಾಟ ರದ್ದು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button