
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ಮಹಾಮಾರಿ ಬೆಳಗಾವಿ ಜಿಲ್ಲೆಗೆ ಕಾಲಿಟ್ಟ ನಂತರದಲ್ಲಿ ಇಂದು ಮೊದಲ ಬಾರಿಗೆ ಹೊಸ ದಾಖಲೆಯೊಂದು ನಿರ್ಮಾಣವಾಗಿದೆ.
ಕಳೆದ 11 ತಿಂಗಳಲ್ಲಿ ಮೊದಲ ಬಾರಿಗೆ ಬೆಳಗಾವಿಯಲ್ಲಿ ಒಂದೇ ಒಂದು ಕೊರೋನಾ ಪ್ರಕರಣ ಕೂಡ ಕಂಡುಬಂದಿಲ್ಲ. ಕಳೆದ ಏಪ್ರಿಲ್ ತಿಂಗಳಲ್ಲಿ ಬೆಳಗಾವಿಯಲ್ಲಿ ಮೊದಲ ಬಾರಿಗೆ 4 ಜನರಿಗೆ ಕೊರೋನಾ ಕಾಣಿಸಿಕೊಂಡ ನಂತರ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ರೋಗಿಗಳು ದಾಖಲಾಗುತ್ತಿದ್ದರು. ಈವರೆಗೆ 5,16,964 ಜನರ ಸ್ಯಾಂಪಲ್ ಪರೀಕ್ಷಿಸಲಾಗಿದ್ದು, 26,860 ಜನರಿಗೆ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ. 342 ಜನರು ಸಾವಿಗೀಡಾಗಿದ್ದಾರೆ.
ಸಧ್ಯ ಆಸ್ಪತ್ರೆಯಲ್ಲಿ 76 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೆ ಮಹಾರಾಷ್ಟ್ರದಲ್ಲಿ ಕೊರೋನಾ 2ನೇ ಅಲೆ ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಆತಂಕ ಮನೆಮಾಡಿದೆ. ಜಿಲ್ಲೆಯ ಗಡಿಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ನಿನ್ನೆ 15 ಪ್ರಕರಣಗಳು ಕಂಡು ಬಂದಿದ್ದು ಅದರಲ್ಲಿ 8 ಜನರು ಮಹಾರಾಷ್ಟ್ರದಿಂದ ಬಂದವರಿದ್ದರು.
ಈ ಮಧ್ಯೆ ಇಂದು ಯಾವುದೇ ಪಾಸಿಟಿವ್ ಪ್ರಕರಣ ಕಾಣಿಸಿಕೊಳ್ಳದ್ದರಿಂದ ಜಿಲ್ಲೆಯ ಜನ ಸ್ವಲ್ಪಮಟ್ಟಿಗೆ ನಿಟ್ಟುಸಿರುವ ಬಿಡುವಂತಾಗಿದೆ. ಆದಾಗ್ಯೂ ಎಚ್ಚರ ತಪ್ಪುವಂತಿಲ್ಲ.
ಬೆಳಗಾವಿಗೆ ಕೊರೊನಾ ಗಂಡಾಂತರ; ಮಹರಾಷ್ಟ್ರದಿಂದ ಬಂದವರಲ್ಲಿ ಸೋಂಕು ಪತ್ತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ