Kannada NewsKarnataka NewsLatest

ಬಿಗ್ ಶಾಕ್ – ರಾಯಬಾಗದ ನಾಲ್ವರಿಗೆ ಕೊರೋನಾ ಪಾಸಿಟಿವ್ : ಬೆಳಗಾವಿಯಲ್ಲೀಗ 7ಕ್ಕೆ ಏರಿಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ರೋಗಿಗಳ ಸಂಖ್ಯೆ 7ಕ್ಕೇರಿದೆ.

ರಾಯಬಾಗದ ಮೂವರು ಮಹಿಳೆಯರು ಸೇರಿದಂತೆ ಒಟ್ಟೂ ನಾಲ್ವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

36 ವರ್ಷ, 67 ವರ್ಷ ಹಾಗೂ 41 ವರ್ಷದ ಮಹಿಳೆಯರಿಗೆ ಹಾಗೂ 40 ವರ್ಷದ ಪುರುಷನಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಇವರೆಲ್ಲರೂ ಮಾರ್ಚ 13ರಿಂದ 18ರ ವರೆಗೆ ನಿಜಾಮುದ್ದೀನ್ ನಲ್ಲಿ ನಡೆದ ಧರ್ಮ ಸಭೆಯಲ್ಲಿ ಪಾಲ್ಗೊಂಡಿದ್ದರು ಎನ್ನುವುದು ಬಹಿರಂಗವಾಗಿದೆ.

ಈ ಎಲ್ಲರಿಗೂ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಳಗಾವಿಯಲ್ಲಿ ಮೊನ್ನೆಯಷ್ಟೆ ಮೂವರಿಗೆ ಸೋಂಕು ದೃಢಪಟ್ಟಿತ್ತು. ಇಂದು ನಾಲ್ಕು ಸೇರಿ ಒಟ್ಟೂ ಸಂಖ್ಯೆ 7ಕ್ಕೇರಿದೆ.

 

Related Articles

Back to top button