Kannada NewsKarnataka NewsLatest

ಬೆಳಗಾವಿಯಲ್ಲಿ ಮತ್ತೆ ಕೊರೋನಾ ಏರುಮುಖ; ಒಂದೇ ದಿನ 12 ಜನರಿಗೆ ಸೋಂಕು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕಳೆದ ಕೆಲವು ತಿಂಗಳುಗಳಿಂದ ತೀವ್ರ ಇಳಿಮುಖ ಕಂಡಿದ್ದ ಕೊರೋನಾ ಬೆಳಗಾವಿಯಲ್ಲಿ ಮತ್ತೆ ಏರತೊಡಗಿದೆ. ಭಾನುವಾರ ಒಂದೇ ದಿನ 12 ಜನರಿಗೆ ಸೋಂಕು ಪತ್ತೆಯಾಗಿದೆ.

ಬೆಳಗಾವಿ ತಾಲೂಕಿನಲ್ಲಿ 9, ರಾಯಬಾಗದಲ್ಲಿ 2 ಹಾಗೂ ಹುಕ್ಕೇರಿಯಲ್ಲಿ ಒಬ್ಬರಲ್ಲಿ ಕೊರೆನಾ ಪತ್ತೆಯಾಗಿದೆ.

Home add -Advt

ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಎಲ್ಲ ಗಡಿಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ತಪಾಸಣೆ ಮಾಡಲಾಗುತ್ತಿದೆ. ಭಾನುವಾರ ಬೆಳಗಾವಿಗೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲೆಯಲ್ಲಿ ಇನ್ನಷ್ಟು ಕಠಿಣ ನಿಯಮ ಜಾರಿಗೊಳಿಸುವ ಸೂಚನೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಆತಂಕ ನಿರ್ಮಾಣವಾಗಿದೆ.

ಬೆಳಗಾವಿಯಲ್ಲಿ ಇನ್ನಷ್ಟು ಕಠಿಣ ನಿಯಮ ಜಾರಿ; ಸಿಎಂ ಘೋಷಣೆ

Related Articles

Back to top button