ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬ್ರಿಟನ್ ನಲ್ಲಿ ಕಂಡು ಬಂದಿರುವ ರೂಪಾಂತರ ವೈರಸ್ ನಿಂದಾಗಿ ರಾಜ್ಯದಲ್ಲಿ ಗಡಿಬಿಡಿ ಆರಂಭವಾಗಿದೆ. ಇನ್ನೇನು ಕೊರೋನಾ ಹೋಯಿತು ಅನ್ನೋ ಹೊತ್ತಿಗೆ ಮತ್ತೆ ಹೊಸ ಅಲೆ ಶುರುವಾಗಿರುವ ಹಿನ್ನೆಲೆಯಲ್ಲಿ ಸರಕಾರಿ ದಿಢೀರ್ ಎಚ್ಚೆತ್ತುಕೊಂಡಿದೆ. ಹಲವು ಕ್ರಮಗಳನ್ನು ಜಾರಿಗೊಳಿಸಿದೆ.
ಬ್ರಿಟನ್ ನಿಂದ ಬಂದಿರುವ ಇಬ್ಬರಿಗೆ ರಾಜ್ಯದಲ್ಲಿ ಕೊರೋನಾ ಕಾಣಿಸಿಕೊಂಡಿದೆ. ದೇಶದಲ್ಲಿ 12ಕ್ಕೂ ಹೆಚ್ಚು ಜನರಿಗೆ ಪಾಸಿಟಿವ್ ಕಂಡು ಬಂದಿದೆ. ಮಾಮೂಲಿ ವೈರಸ್ ಗಿಂದ ಶೇ.70ರಷ್ಟುಹೆಚ್ಚು ವೇಗವಾಗಿ ಹರಡುವ ಈ ವೈರಸ್ ಎಲ್ಲೆಡೆ ಆತಂಕ ಸೃಷ್ಟಿಸಿದೆ.
ಹಾಗಾಗಿ ರಾಜ್ಯ ಸರಕಾರ ವಿವಿಧ ಹಂತಗಳಲ್ಲಿ ಮೀಟಿಂಗ್ ಮೇಲೆ ಮೀಟಿಂಗ್ ನಡೆಸುತ್ತಿದೆ. ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಅಧಿಕಾರಿಗಳು ಒಂದಾದ ಮೇಲೆ ಒಂದು ಸಭೆ ನಡೆಸುತ್ತಿದ್ದಾರೆ. ಜನೆವರಿ 1ರಿಂದ ಶಾಲೆಗಳನ್ನು ಆರಂಭಿಸಬೇಕೆಂದಿದ್ದ ಸರಕಾರ ಪುನಾರಾಲೋಚನೆ ನಡೆಸಲು ನಿರ್ಧರಿಸಿದೆ. ಈ ಸಂಬಂಧ ಎಲ್ಲ ಜಿಲ್ಲೆಗಳ ಡಿಡಿಪಿಐಗಳ ಜೊತೆಗೂ ಚರ್ಚಿಸಲಿದೆ. ಹಿರಿಯ ಅಧಿಕಾರಿಗಳ ಸಭೆ ಕರೆಯಲಾಗಿದೆ.
ಕೊರೋನಾ ಹರಡದಂತೆ ತಡೆಯುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಯುತ್ತಿದೆ. ಮಾರುಕಟ್ಟೆಗಳಲ್ಲಿ ನಿಯಮಗಳನ್ನು ಕಠಿಣಗೊಳಿಸಲು ನಿರ್ಧರಿಸಲಾಗಿದೆ. ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಮತ್ತು ಕೊರೋನಾ ಲಕ್ಷಣಗಳಿರುವವರ ಪ್ರವೇಶ ನಿಷೇಧಿಸಲಾಗಿದೆ. ಹೇಗಾದರೂ ಮಾಡಿ ಮತ್ತೆ ಕೊರೋನಾ ಹರಡದಂತೆ ಜಾಗ್ರತೆ ವಹಿಸಲು ಸರಕಾರ ಮುಂದಾಗಿದೆ. ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ಇಂದು ಕೂಡ ಸಭೆಗಳ ಮೇಲೆ ಸಭೆ ನಡೆಸಲು ನಿರ್ಧರಿಸಲಾಗಿದೆ. ಶಾಲೆಗಳ ಆರಂಭ, ಪರೀಕ್ಷೆ ನಡೆಸುವುದು ಸೇರಿದಂತೆ ಎಲ್ಲ ವಿಷಯಗಳ ಚರ್ಚೆ ನಡೆಯಲಿದೆ. ರಾಜ್ಯದಲ್ಲಿ ನೈಟ್ ಕರ್ಫ್ಯೂ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ ಬೆನ್ನಲ್ಲೇ ಆರೋಗ್ಯ ಸಚಿವ ಸುಧಾಕರ ಈ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಕೇಂದ್ರ ಸರಕಾರದ ಮಾರ್ಗದರ್ಶಿ ಸೂತ್ರ– SOPforSurveillanceandresponseforthenewSARSCov2variant
ಸಂಬಂಧಿಸಿದ ಸುದ್ದಿಗಳು –
ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆ ಬಗ್ಗೆ ಶಿಕ್ಷಣ ಸಚಿವರ ಸ್ಪಷ್ಟನೆ
Good News: ಲಂಡನ್ ನಿಂದ ಬೆಳಗಾವಿಗೆ ಬಂದ ಮಹಿಳೆಯ ವರದಿ ನೆಗೆಟಿವ್
ಲಂಡನ್ ನಿಂದ ಬಂದ ಇಬ್ಬರಿಗೆ ಕೊರೋನಾ ದೃಢ
ಬೆಳಗಾವಿಗೂ ಬ್ರಿಟನ್ ಸೋಂಕಿನ ಆತಂಕ: ಲಂಡನ್ ನಿಂದ ಬೆಳಗಾವಿಗೆ ಬಂದ ಮಹಿಳೆ ಟೆಸ್ಟ್
ನೈಟ್ ಕರ್ಫ್ಯೂ ಬಗ್ಗೆ ಸಿಎಂ ಯಡಿಯೂರಪ್ಪ ಸ್ಪಷ್ಟನೆ
ಹೊಸ ವೈರಾಣು: ರಾಜ್ಯದಲ್ಲಿ ಹಲವು ಕ್ರಮ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ