Kannada NewsKarnataka NewsLatest

ಬೆಳಗಾವಿಯ 9 ಜನರಿಗೆ ಕೊರೋನಾ ವೈರಸ್: ಸುದ್ದಿಯ ನಿಜಾಂಶ ಏನು?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿದೇಶದಿಂದ ಬೆಳಗಾವಿಗೆ ವಾಪಸ್ ಬಂದಿರುವ 9 ಜನರಿಗೆ ಕೊರೋನಾ ವೈರಸ್ ಇರುವುದು ಪತ್ತೆಯಾಗಿದೆ. ಅವರನ್ನೆಲ್ಲ ಗೃಹಬಂಧನದಲ್ಲಿಡಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿ ಭಿತ್ತರವಾಗುತ್ತಿದೆ.

ಆದರೆ ಈ ಕುರಿತು ಜಿಲ್ಲಾಧಿಕಾರಿಗಳು ಮಾಧ್ಯಮ ಪ್ರಕಟಣೆ ನೀಡಿದ್ದಾರೆ. ಈ ರೀತಿಯ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವಿದೇಶದಿಂದ ಬಂದಿರುವ 9 ಜನರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಇಬ್ಬರ ಆರೋಗ್ಯದ ಮೇಲೆ ಈಗಾಗಲೆ 28 ದಿನಗಳ ಕಾಲ ನಿಗಾ ವಹಿಸಲಾಗಿದೆ. ಇನ್ನುಳಿದ 7 ಜನರ ಮೇಲೆ ಮುಂದಿನ 28 ದಿನ ನಿಗಾವಹಿಸಲಾಗುವುದು.

Home add -Advt

ಆದರೆ ಯಾರಲ್ಲೂ ಕೊರೋನಾ ವೈರಸ್ ಕಂಡು ಬಂದಿಲ್ಲ. ಯಾರನ್ನೂ ಗೃಹ ಬಂದನದಲ್ಲಿ ಇಟ್ಟಿಲ್ಲ. ಈ ಬಗ್ಗೆ ಯಾರಿಗೂ ಆತಂಕ ಬೇಡ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಿದೇಶದಿಂದ ಬರುವ ಎಲ್ಲ ಪ್ರಜೆಗಳ ಮೇಲೂ ವಿಶೇಷ ನಿಗಾ ವಹಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಸಹ ಸೂಚನೆ ನೀಡಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ವಿಶೇಷ ಕೊಠಡಿಯನ್ನೂ ಕಾಯ್ದಿರಿಸಲಾಗಿದೆ. ಹಾಗಾಗಿ ಜನ ಸುಳ್ಳು ಸುದ್ದಿಯಿಂದ ಭೀತಿಗೊಳಗಾಗುವುದು ಬೇಡ ಎಂದು ಅವರು ತಿಳಿಸಿದ್ದಾರೆ.

Related Articles

Back to top button