ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹೆಚ್ಚುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 48,916 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 13,36,861ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಒಂದೇ ದಿನ 757 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ ಕೂಡ 31,358 ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ಇನ್ನು 13,36,861 ಮಂದಿ ಸೋಂಕಿತರ ಪೈಕಿ 8,49,431 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಪ್ರಸ್ತುತ ಇನ್ನೂ ದೇಶದಲ್ಲಿ 4,56,071 ಜನ ಸೋಂಕಿನಿಂದ ಬಳಲುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ 9,615 ಕೇಸು, 278 ಸಾವು, ಆಂಧ್ರಪ್ರದೇಶದಲ್ಲಿ 8,147 ಕೇಸು, 49 ಸಾವು, ತಮಿಳುನಾಡಿನಲ್ಲಿ 6472 ಸೋಂಕು, 88 ಸಾವು, ಕರ್ನಾಟಕದಲ್ಲಿ 5007 ಸೋಂಕು 110 ಸಾವು ದಾಖಲಾಗಿದೆ.
ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ನಡುವಲ್ಲೇ ಕೊರೋನಾ ಮರಣ ಪ್ರಮಾಣ ಶೇ.2.38ಕ್ಕೆ ಇಳಿಕೆಯಾಗಿದೆ.
ಮೇನಲ್ಲಿ ಕೊರೋನಾ ಸಾವಿನ ಪ್ರಮಾಣ ಶೇ.3.2ರಷ್ಟಿತ್ತು. ಜು.10ರಂದು ಸಾವಿನ ಪ್ರಮಾಣ ಶೇ.2.72ಕ್ಕೆ ಇಳಿಕೆಯಾಗಿತ್ತು. ನಂತರ ಮತ್ತಷ್ಟು ಇಳಿಕೆ ಕಂಡು ಜು.20ರಂದು ಶೇ.2.49ಕ್ಕೆ ಕುಸಿದಿತ್ತು. ಇದೀಗ ಮರಣ ಪ್ರಮಾಣ ಮತ್ತಷ್ಟು ಇಳಿಕೆ ಕಂಡಿರುವುದು ಆಶಾವಾದ ಮೂಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ