ಲಾಕ್ ಡೌನ್ ಸಡಿಲಿಕೆ ನಡುವೆ ಹೆಚ್ಚಿದ ಕೊರೊನಾ ಸೋಂಕು

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶಾದ್ಯಂತ ಎರಡು ದಿನಗಳಿಂದ ಕೊರೋನಾ ಸೋಂಕು ಹೆಚ್ಚುತ್ತಿದ್ದು, ಒಂದೇ ದಿನ ಸುಮಾರು 4,898 ಹೊಸ ಕೊರೊನಾ ಪ್ರಕರಣಗಳು ಕಂಡುಬಂದಿವೆ. ಈ ನಡುವೆ ಇಂದಿನಿಂದ ಮೂರನೇ ಹಂತದ ಲಾಕ್‌ಡೌನ್ ಆರಂಭವಾಗಿದ್ದು ಕೇಂದ್ರ ಸರ್ಕಾರ ಹಲವಾರು ನಿರ್ಬಂಧಗಳನ್ನು ಸಡಿಲಗೊಳಿಸಿದೆ.

ಕೊರೋನಾ ದಿಂದಾಗಿ ಕಳೆದ 24 ಗಂಟೆಯಲ್ಲಿ 83 ರೋಗಿಗಳು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 1,306 ಕ್ಕೆ ಏರಿದೆ. ದೇಶದಲ್ಲಿ ಪ್ರಸ್ತುತ 28,070 ಸಕ್ರಿಯ ಕೋವಿಡ್ -19 ರೋಗಿಗಳಿದ್ದಾರೆ. 10,886 ರೋಗಿಗಳು ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಸಚಿವಾಲಯ ತಿಳಿಸಿದೆ. ಒಟ್ಟು ಸಂಖ್ಯೆ ಸೋಂಕಿತರ ಸಂಖ್ಯೆ 40,000 ಗಡಿ ದಾಟಿದೆ.

Home add -Advt

ಇಂದಿನಿಂದ ಮೇ 17ರವರೆಗೆ ಮೂರನೇ ಹಂತದ ಲಾಕ್‌ಡೌನ್ ಮುಂದುವರೆಯಲಿದೆ. ಕೆಲ ರಾಜ್ಯಗಳಲ್ಲಿ ಆರೆಂಜ್ ಹಾಗೂ ಗ್ರೀನ್ ಝೋನ್ ಗಳಲ್ಲಿ ಕೆಲಸಡಿಲಿಕೆಗಳನ್ನು ಮಾಡಲಾಗಿದೆ.

Related Articles

Back to top button