Kannada News

ರಾಜ್ಯದಲ್ಲಿ 5 ಜನರಿಗೆ ಕೊರೊನಾ ಸೋಂಕು; ಬೆಳಗಾವಿಯಲ್ಲಿ ಯಾವುದೇ ಹೊಸ ಪ್ರಕರಣವಿಲ್ಲ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 5 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 606ಕ್ಕೆ ಏರಿಕೆ ಆಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಹೊಸ ಸೋಂಕಿನ ಪ್ರಕರಣ ಪತ್ತೆಯಾಗಿಲ್ಲ.

ರಾಜ್ಯ ಆರೋಗ್ಯ ಇಲಾಖೆ ನೀಡಿದ ಮಾಹಿತಿ ಪ್ರಕಾರ ಇಂದು ಕಲಬುರಗಿಯ ಮೂವರಿಗೆ ಹಾಗೂ ಬಾಗಲಕೋಟೆಯ ಇಬ್ಬರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ರೆಡ್ ಝೋನ್ ವಲಯಗಳಾಗಿರುವ ಬೆಳಗಾವಿ, ಬೆಂಗಳೂರು, ಮೈಸೂರಿನಲ್ಲಿ ಯಾವುದೇ ಸೋಂಕು ಇಂದು ಪತ್ತೆಯಾಗಿಲ್ಲ ಎಂಬುದು ಸಮಾಧಾನಕರ ಸಂಗತಿ.

ವಿಶೇಷವೆಂದರೆ ಇಂದು ಸೋಂಕಿತರು ಪತ್ತೆಯಾಗಿದ್ದಕ್ಕಿಂತ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆಯೇ ಹೆಚ್ಚಾಗಿದೆ. ಇಂದು ರಾಜ್ಯದ ವಿವಿಧ ಜಿಲ್ಲೆಗಳ ಆಸ್ಪತ್ರೆಯಿಂದ ಒಟ್ಟು 11 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆ 282ಕ್ಕೆ ಏರಿಕೆ ಕಂಡಿದೆ.

ಸೋಂಕಿತರ ವಿವರ:
ರೋಗಿ-602: ಕಲಬುರಗಿಯ 13 ಬಾಲಕಿ. ರೋಗಿ-532ರ ಸಂಪರ್ಕ ಹೊಂದಿದ್ದರು.
ರೋಗಿ-603: ಕಲಬುರಗಿಯ 54 ಪುರುಷ. ರೋಗಿ-532ರ ಸಂಪರ್ಕದಲ್ಲಿದ್ದರು.
ರೋಗಿ-604: ಕಲಬುರಗಿಯ 41 ಪುರುಷ. ತೀವ್ರತರ ಉಸಿರಾಟದ ಸೋಂಕು.
ರೋಗಿ-605: ಬಾಗಲಕೋಟೆಯ 68 ವೃದ್ಧ. ರೋಗಿ-380ರ ದ್ವಿತೀಯ ಸಂಪರ್ಕದಲ್ಲಿದ್ದರು.
ರೋಗಿ-606: ಬಾಗಲಕೋಟೆಯ 60 ವೃದ್ಧೆ. ರೋಗಿ-380ರ ದ್ವಿತೀಯ ಸಂಪರ್ಕದಲ್ಲಿದ್ದರು.

 

https://www.facebook.com/Pragativahini/ Please open the link and like the Face book page. ಈ ಲಿಂಕ್ ಓಪನ್ ಮಾಡಿ, ಪೇಜ್ ಲೈಕ್ ಮಾಡಿ. Thank you

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button