ಸುರಕ್ಷತಾ ವ್ಯವಸ್ಥೆ ಇಲ್ಲದೇ ಕೆಲಸ ಮಾಡಲ್ಲ ಎಂದ ಆಸ್ಪತ್ರೆ ಸಿಬ್ಬಂದಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಸೋಂಕಿತರಿಗೆ ನಾವು ಚಿಕಿತ್ಸೆ ನೀಡುವುದಿಲ್ಲ. ನಮಗೆ ಅಪಾಯ ತಂದುಕೊಂಡು ನಾವು ಕೆಲಸ ಮಾಡಲು ಸಿದ್ಧರಿಲ್ಲ ಎಂದು ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ.

ಕೊರೋನಾ ಪಾಸಿಟಿವ್ ಇದ್ದ ಮಹಿಳೆಯೊಬ್ಬರು ದಾಖಲಾಗಿದ್ದ ಬೆನ್ನಲ್ಲೇ ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಅಲ್ಲಿಯ ಸ್ನಾತಕೋತ್ತರ ವೈದ್ಯರು, ನರ್ಸ್ ಹಾಗೂ ಇತರೆ ಸಿಬ್ಬಂದಿ ಪ್ರತಿಭಟನೆಗಿಳಿದಿದ್ದಾರೆ. ತಾವ್ಯಾರು ಕೆಲಸ ಮಾಡೋದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಆಸ್ಪತ್ರೆಯಲ್ಲಿರುವ ಇತರೆ ರೋಗಿಗಳು ಸಂಕಷ್ಟಕ್ಕೀಡಾಗಿದ್ದಾರೆ.

ಪಾದರಾಯನಪುರ ನಿವಾಸಿ ಹಾಗೂ ಎಂಟು ತಿಂಗಳ ಗರ್ಭಿಣಿಯೊಬ್ಬರು ಕೆಆರ್ ಮಾರುಕಟ್ಟೆ ಬಳಿ ಇರುವ ವಾಣಿ ವಿಲಾಸ ಆಸ್ಪತ್ರೆಗೆ ದಾಖಲಾಗಿದ್ದರು. ಇವರ ಸ್ಯಾಂಪಲ್ ಪರೀಕ್ಷೆ ಮಾಡಿದಾಗ ಕೊರೋನಾ ಪಾಸಿಟಿವ್ ಇರುವುದು ಖಚಿತವಾಗಿತ್ತು. ಫಲಿತಾಂಶ ಬಂದ ಕೂಡಲೇ ಆಕೆಯನ್ನು ಪಕ್ಕದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟರಲ್ಲಾಗಲೇ ಆ ಮಹಿಳೆಯ ಅನೇಕ ಸಂಬಂಧಿಕರು ಆಸ್ಪತ್ರೆಯೆಲ್ಲೆಡೆ ಓಡಾಟ ನಡೆಸಿದ್ದರು. ಇದು ಆಸ್ಪತ್ರೆಯ ಸಿಬ್ಬಂದಿಗೆ ಭೀತಿ ಸೃಷ್ಟಿಸಿದೆ.

ಅಲ್ಲದೇ ಕೆಲ ಸೋಂಕಿತ ರೋಗಿಗಳನ್ನೂ ಇಲ್ಲಿಯೇ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಷ್ಟಾದರೂ ಸಿಬ್ಬಂದಿಗೆ ಸರಿಯಾದ ಪಿಪಿಇ ಕಿಟ್​ಗಳನ್ನು ನೀಡಿಲ್ಲ.ತಮಗೆ ಸೋಂಕು ತಗುಲಿದರೆ ಏನು ಮಾಡುವುದು? ನಮ್ಮನ್ನು ಕೊರೊನಾ ವಾರಿಯರ್ಸ್ ವಿಮಾ ಯೋಜನೆಗೂ ಸೇರಿಸಿಲ್ಲ. ಆರಂಭದಿಂದಲೂ ಸೂಕ್ತ ಮುಂಜಾಗ್ರತಾ ಕ್ರಮ ವಹಿಸಿಲ್ಲ. ನಮ್ಮ ಪ್ರಾಣಕ್ಕೆ ಕುತ್ತು ತಂಡುಕೊಂಡು ಚಿಕಿತ್ಸೆ ನೀಡಲು ಸದಹ್ಯವಿಲ್ಲ ಎಂಬುದು ಸಿಬ್ಬಂದಿಗಳ ವಾದವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button