
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಮಹಾಮಾರಿ ಕೊರೊನಾ ಸೋಂಕಿಗೆ ಪತಂಜಲಿ ಸಂಸ್ಥೆಯಿಂದ ಔಷಧ ಸಿದ್ಧಪಡಿಸಲಾಗಿದೆ. ಈ ಕುರಿತು ಪತಂಜಲಿ ಸಂಸ್ಥೆಯ ಯೋಗಗುರು ಬಾಬಾ ರಾಮ್ ದೇವ್ ಮಾಹಿತಿ ನೀಡಿದ್ದು, ಕೊರೊನಿಲ್ ಎಂಬ ಔಷಧವನ್ನು ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಿಲ್ ಎಂಬ ಔಷಧ ಬಿಡುಗಡೆಗೊಳಿಸಿದರು. ಇದು ಮೊದಲ ಸಾಕ್ಷ್ಯ ಆಧಾರಿತ ಕೊರೊನಾ ಔಷಧವಾಗಿದ್ದು, ವಿಶ್ವದ 158 ದೇಶಗಳಿಗೆ ಅನುಕೂಲವಾಗಲಿದೆ. ಪತಂಜಲಿ ಸಂಸ್ಥೆ ವೈಜ್ಞಾನಿಕ ಸಂಶೋಧನೆ ನಡೆಸಿ ಈ ಔಷಧ ಅಭಿವೃದ್ಧಿಪಡಿಸಿದೆ ಎಂದರು.
ಇದೇ ವೇಳೆ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವಧನ್, ಜನರು ಆಯುರ್ವೇದವನ್ನು ಒಪ್ಪಿಕೊಂಡಿದ್ದಾರೆ. ಆಯುರ್ವೇದ ದೇಶದಲ್ಲಿ 30,000 ಕೋಟಿಯ ಆರ್ಥಿಕತೆಯನ್ನು ಹೊಂದಿದೆ. ಕೋವಿಡ್ ಗೂ ಮೊದಲು 15-20% ಪ್ರಗತಿ ಕಾಣುತ್ತಿತ್ತು. ಕೋವಿಡ್ ನಂತರ ಈ ಪ್ರಗತಿ 50-90%ಗೆ ಏರಿಕೆಯಾಗಿದೆ. ಆಯುರ್ವೇದ ರಫ್ತಿನಲ್ಲೂ ಪ್ರಗತಿ ಸಾಧಿಸಿದೆ ಎಂದು ಹೇಳಿದರು.



