Latest

ಆಭರಣ ಪ್ರಿಯರಿಗೆ ಮತ್ತೊಂದು ಶಾಕ್

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶದಲ್ಲಿ ಕೊರೊನಾ ಮೂರನೆ ಅಲೆ ತಗ್ಗುತ್ತಿದ್ದಂತೆ ಮದುವೆ ಸಮಾರಂಭಗಳು ಆರಂಭವಾಗಿವೆ. ಆದರೆ ಚಿನ್ನಾಭರಣಗಳ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ಆಭರಣ ಕೊಳ್ಳುವವರಿಗೆ ಚಿನ್ನಾಭರಣ ದರಗಳ ಬಗ್ಗೆ ಮಾಹಿತಿ ಇರಲೇಬೇಕು. ಚಿನ್ನದ ದರ ದಿಢೀರ್ ಏರಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 51 ಸಾವಿರ ಗಡಿ ದಾಟಿರುವುದು ಆಭರಣ ಪ್ರಿಯರಿಗೆ ಆಘಾತ ನೀಡಿದಂತಾಗಿದೆ. ಹಾಗಾದರೆ ಚಿನ್ನ ಬೆಳ್ಳಿ ದರ ಯಾವ ನಗರದಲ್ಲಿ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನ 46,800 ರೂ ಆಗಿದ್ದು, 22 ಕ್ಯಾರಟ್ 100 ಗ್ರಾಂ ಚಿನ್ನ 4,68,000 ರೂ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನ 51,050 ರೂ. ಇದೆ. 24 ಕ್ಯಾರಟ್ ನ 100 ಗ್ರಾಂ ಚಿನ್ನ 5,10,500 ರೂ ಆಗಿದೆ.

ಮುಂಬೈನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನ 52,010 ರೂಪಾಯಿ ಇದೆ. ಚೆನ್ನೈ ನಲ್ಲಿ 24ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 52,000 ರೂಪಾಯಿ ಆಗಿದೆ. ಹೈದರಾಬಾದ್ ನಲ್ಲಿ 24 ಕ್ಯಾರಟ್ 10 ಗ್ರಾಂ ಚಿನ್ನ 51,960 ರೂ ಇದ್ದರೆ, ಜೈಪುರದಲ್ಲಿ 51,950 ಹಾಗೂ ಕೋಲ್ಕತ್ತಾದಲ್ಲಿ 51,920 ರೂಪಾಯಿ ಇದೆ.

ಬೆಳ್ಳಿ ದರದಲ್ಲಿಯೂ ಏರಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿಗೆ 69,200 ರೂಪಾಯಿ ಆಗಿದೆ.

ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅಪರಾಧಿ
ಪ್ರಜ್ವಲ್ ರೇವಣ್ಣಗೆ ಸಂಕಷ್ಟ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button