ಕೊರೊನಾದಿಂದ ದೇಶದಲ್ಲಿ ಆರ್ಥಿಕ ಸಂಕಷ್ಟ: ಜರ್ಮನ್ ವಿತ್ತ ಸಚಿವ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ; ಬರ್ಲಿನ್: ಕೊರೊನಾ ವೈರಸ್ ವಿಶ್ವಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು ಜರ್ಮನಿಯಲ್ಲೂ 400ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ದೇಶದ ಅರ್ಥವ್ಯವಸ್ಥೆ ಸಂಪೂರ್ಣ ಕುಸಿದಿದದ್ದಕ್ಕೆ ನೊಂದು ಜರ್ಮನಿಯ ಹಣಕಾಸುವ ಸಚಿವ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹೆಸ್ಸಿ ರಾಜ್ಯದ ಹಣಕಾಸು ಸಚಿವ ಥಾಮಸ್ ಶೇಫರ್ (54) ಆತ್ಮಹತ್ಯೆಗೆ ಶರಣಾದವರು. ಶನಿವಾರ ರೈಲ್ವೇ ಟ್ರ್ಯಾಕ್ ಬಳಿ ವಿತ್ತ ಸಚಿವರ ಮೃತ ದೇಹ ಪತ್ತೆಯಾಗಿದೆ. ಹೆಸ್ಸಿಯನ್ನು ಜರ್ಮನಿಯ ಆರ್ಥಿಕ ರಾಜಧಾನಿ ಎಂದೇ ಕರೆಯಲಾಗುತ್ತದೆ. ಹೆಸ್ಸಿ ರಾಜ್ಯದಲ್ಲಿ ಆರ್ಥಿಕ ಸಚಿವರಾಗಿದ್ದ ಶೇಫರ್ ಕೊರೋನಾ ವೈರಸ್​ನಿಂದ ಉಂಟಾಗಿರುವ ಆರ್ಥಿಕ ಹೊಡೆತದಿಂದ ಕಂಗೆಟ್ಟಿದ್ದರು. ಇದರಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದ ಅವರು ರೈಲ್ವೆ ಹಳಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೆಸ್ಸಿ ರಾಜ್ಯದಲ್ಲಿ 10 ವರ್ಷದಿಂದ ಶೇಫರ್ ಹಣಕಾಸು ಸಚಿವರಾಗಿದ್ದರು. ರಾಜ್ಯದಲ್ಲಿ ಕೊರೊನಾ ವೈರಸ್ ನಿಂದ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧಗೊಂಡಿದ್ದವು. ಅರ್ಥ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸಲು ಶೇಫರ್ ಹಗಲಿರುಳು ಕೆಲಸ ಮಾಡುತ್ತಿದ್ದರು. ಆದ್ರೂ ಅರ್ಥ ವ್ಯವಸ್ಥೆಯಲ್ಲಿ ಚೇತರಿಕೆ ಕಂಡು ಬಂದಿರಲಿಲ್ಲ. ಇದರಿಂದ ಆಘಾತಕ್ಕೊಳಗಾಗಿದ್ದರು.

ಸಚಿವರ ಸಾವಿನ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಹೆಸ್ಸಿ ರಾಜ್ಯದ ಮುಖ್ಯಮಂತ್ರಿ ವಾಲ್ಕರ್, ಶೇಫರ್ ರಾಜ್ಯದ ಜನರ ಬಗ್ಗೆ ತೀವ್ರವಾಗಿ ಯೋಚಿಸುತ್ತಿದ್ದರು, ಕಾಳಜಿ ಹೊಂದಿದ್ದರು ಅವರ ಸಾವಿನ ಸುದ್ದಿ ನಂಬಲು ಆಗುತ್ತಿಲ್ಲ ಎಂದಿದ್ದಾರೆ.

Home add -Advt

ಜರ್ಮನಿಯಲ್ಲಿ 50 ಸಾವಿರಕ್ಕೂ ಅಧಿಕ ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದರೆ. 400 ಅಧಿಕ ಜನರನ್ನು ಕೊರೊನಾ ಬಲಿ ಪಡೆದುಕೊಂಡಿದೆ.

Related Articles

Back to top button