
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ 2ನೇ ಅಲೆ ಅತಿವೇಗವಾಗಿ ಹರಡುತ್ತಿದೆ. ರಾಜ್ಯದ ಮೂಲೆ ಮೂಲೆಯಲ್ಲೂ ಸೋಂಕಿತರ ಸಂಖ್ಯೆ ಜೊತೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗಾಗಿ ಕೋವಿಡ್ ಮೊದಲ ಅಲೆಗಿಂತಲೂ ಈಗ ಹೆಚ್ಚು ಜಾಗೃತೆ ವಹಿಸಸುವ ಅಗತ್ಯವಿದೆ. ಎಲ್ಲವೂ ಹಣದಿಂದ ಆಗುತ್ತದೆ, ದುಡ್ಡಿದ್ದರೆ ಏನುಬೇಕಾದರೂ ಮಾಡಬಹುದು ಎಂಬುದು ಸುಳ್ಳು. ನಗರದ ಆಸ್ಪತ್ರೆಯಲ್ಲಿ ಸ್ಥಳಾವಕಾಶವಿಲ್ಲ. ರೋಗಿಗಳಿಗೆ ಬೆಡ್ ವ್ಯವಸ್ಥೆ ಇಲ್ಲದಾಗಿದೆ. ಹಾಗಾಗಿ ಎಷ್ಟೇ ಹಣವಿದ್ದರೂ ನಿಮ್ಮ ಹಣ ಈಗ ಯಾವುದೇ ಕಾರ್ಯಕ್ಕೆ ಬರುತ್ತಿಲ್ಲ.
ಕೊರೊನಾದಂತಹ ಈ ಸಂದರ್ಭದಲ್ಲಿ ಜೀವ ಉಳಿದರೆ ಮುಂದೆ ಜೀವನ ಎಂಬ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ನಿಮ್ಮನ್ನು ನೀವು ಉಳಿಸಿಕೊಳ್ಳಲು, ಕೊರೊನಾ ವಿರುದ್ಧ ಹೋರಾಡುವ ಇಚ್ಚೆ ಉಳ್ಳವರು ಈ ಒಂದು ಉಪಾಯವನ್ನು ಅನುಸರಿಸಿ ಸಾಕು.
01.ಯಾರು ಕೂಡ ಖಾಲಿ ಹೊಟ್ಟೆಯಲ್ಲಿ ಇರಬೇಡಿ.
02.ಉಪವಾಸ ಇತ್ಯಾದಿ ಮಾಡುವುದು ಬೇಡ.
O3.ದಿನನಿತ್ಯ ಒಂದು ಗಂಟೆ ಬಿಸಿಲಿನಲ್ಲಿ ನಿಲ್ಲಿರಿ.
04. Ac ಉಪಯೋಗ ಮಾಡಬೇಡಿ.
05.ಬಿಸಿ ನೀರನ್ನೇ ಸೇವಿಸಿರಿ.
06 ಸಾಸಿವೆಯೆಣ್ಣೆ ಮೂಗಿಗೆ ಸವರಿಕೊಳ್ಳಿ.
07.ಮನೆಯಲ್ಲಿ ಕರ್ಪೂರವನ್ನು ಹಚ್ಚರಿ.
08 ದಾಲ್ಚಿನ್ನಿ ಉಪಯೋಗ ಮಾಡಿರಿ
09.ರಾತ್ರಿ ಮಲಗುವ ಮೊದಲು ಹಾಲಿನಲ್ಲಿ ಅರಿಶಿನ ಹಾಕಿ ಕುಡಿಯಿರಿ. ಇದರಿಂದಾಗಿ ಶರೀರದಲ್ಲಿ ಇಮ್ಯೂನಿಟಿ ಹೆಚ್ಚುತ್ತದೆ.
10.ಸಾಧ್ಯವಾದರೆ ಒಂದು ಚಮಚ ಚವನಪ್ರಾಶ ಸೇವಿಸಿರಿ.
11.ಬೆಳಿಗ್ಗೆ ಚಹಾಕ್ಕೆ ಒಂದು ಲವಂಗ ಹಾಕಿ ಕುಡಿಯಿರಿ
12 ಕಿತ್ತಲೆಹಣ್ಣನ್ನು ಹೆಚ್ಚಾಗಿ ಸೇವಿಸಿರಿ.
ತಾವು ಕರೋನವನ್ನು ಸೋಲಿಸಲು ಇಚ್ಛಿಸುತ್ತೀರಾದರೆ ಈ ಮೇಲಿನ ವಿಷಯವನ್ನು ತಮ್ಮದನ್ನಾಗಿ ಮಾಡಿಕೊಳ್ಳಿ.