Latest

ನಿನ್ನೆಗಿಂತ ಕುಸಿತ ಕಂಡ ಕೊರೊನಾ; ಆದರೆ ಒಮಿಕ್ರಾನ್ ಸೋಂಕು ಸ್ಫೋಟ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಆದರೆ ಸೋಂಕಿತರ ಸಂಖ್ಯೆಯಲ್ಲಿ ಇಂದು ನಿನ್ನೆಗಿಂತ ಕುಸಿತ ಕಂಡಿದೆ. ಕಳೆದ 24 ಗಂಟೆಯಲ್ಲಿ 2,58,089 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.

ಆದರೆ ಕೊರೊನಾ ಸೋಂಕಿನಿಂದ ಸಾವಿನ್ನಪ್ಪಿದವರ ಸಂಖ್ಯೆ ಒಂದೇ ದಿನದಲ್ಲಿ ಭಾರಿ ಏರಿಕೆಯಾಗಿದ್ದು, 24 ಗಂಟೆಯಲ್ಲಿ 385ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಈಮೂಲಕ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 486451 ಕ್ಕೆ ಏರಿಕೆಯಾಗಿದೆ.

Home add -Advt

ಇನ್ನು ದೇಶದಲ್ಲಿ 1656341 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 151740 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ.

ಕೊರೊನಾ ಅಟ್ಟಹಾಸದ ನಡುವೆಯೇ ರೂಪಾಂತರಿ ವೈರಸ್ ಒಮಿಕ್ರಾನ್ ಸ್ಫೋಟಗೊಂಡಿದ್ದು, ಸೋಂಕಿತರ ಸಂಖ್ಯೆ 8,209ಕ್ಕೆ ಏರಿಕೆಯಾಗಿದೆ.

 

Related Articles

Back to top button