ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಭಾರತದಲ್ಲಿ ಸೋಂಕು ಪೀಡಿತರ ಸಂಖ್ಯೆ 1024ಕ್ಕೆ ಏರಿಕೆಯಾಗಿದೆ. 27 ಜನರು ಸಾವನ್ನಪ್ಪಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, 901 ಮಂದಿಯಲ್ಲಿ ಈಗ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ. 96 ಮಂದಿ ಸೋಂಕಿನಿಂದ ಮುಕ್ತಗೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 83ಕ್ಕೆ ತಲುಪಿದೆ. ಮಹಾರಾಷ್ಟ್ರದಲ್ಲಿ ಈ ಸಂಖ್ಯೆ 200 ಗಡಿ ದಾಟಿದೆ. ಉತ್ತರ ಪ್ರದೇಶದಲ್ಲಿ 70, ದೆಹಲಿಯಲ್ಲಿ ದಿನೇ ದಿನೇ ಆತಂಕಕಾರಿ ರೀತಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಒಂದೇ ದಿನ 20ಕ್ಕೂ ಹೆಚ್ಚು ಪ್ರಕರಣಗಳೂ ಬೆಳಕಿಗೆ ಬಂದಿವೆ.
ಈ ನಡುವೆ ವೈರಸ್ ಹರಡುವ ಶಂಕೆಯಿಂದ ಲಕ್ನೋ ಜೈಲಿನಲ್ಲಿದ್ದ 38 ಕೈದಿಗಳನ್ನ ಪೆರೋಲ್ ಮೇಲೆ ಹೊರಗೆ ಬಿಡುಗಡೆ ಮಾಡಲಾಗಿದೆ. ಇವರಿಗೆ 8 ವಾರ ಅವಕಾಶ ಕೊಡಲಾಗಿದೆ. ಈ ಜೈಲಿನಲ್ಲಿರುವ 600 ಕೈದಿಗಳನ್ನೂ ಕೂಡ ಇದೇ ರೀತಿ ಹೊರಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಹೊರಗೆ ಬಿಡುವ ಮುನ್ನ ಪ್ರತಿಯೊಬ್ಬ ಕೈದಿಯನ್ನೂ ತಪಾಸಣೆಗೆ ಒಳಪಡಿಸಲಾಗುತ್ತದೆ.
ವಿಶ್ವಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಭಾನುವಾರ ಸಾವಿನ ಸಂಖ್ಯೆ 33 ಸಾವಿರ ಗಡಿ ತಲುಪಿದೆ. ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 1,33,000 ಗಡಿ ದಾಟಿದೆ. ಇದು ವಿಶ್ವದಲ್ಲೇ ಅತಿ ಹೆಚ್ಚು ಎನ್ನಾಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ