ಮನೆಯಿಂದ ಹೊರಬಂದವರಿಗೆ ರಸ್ತೆಯಲ್ಲಿ ಕಸಗುಡಿಸುವ ಶಿಕ್ಷೆ

ಪ್ರಗತಿವಾಹಿನಿ ಸುದ್ದಿ; ಕಲಬುರಗಿ: ಹೆಚ್ಚುತ್ತಿರುವ ಕೊರೊನಾ ವೈರಸ್ ನಿಯಂತ್ರಣಕ್ಕೆ ಮುಂಜಾಗೃತಾ ಕ್ರಮವಾಗಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದು, ಮನೆಯಿಂದ ಹೊರಬರದಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದರೂ ಕೂಡ ರಾಜ್ಯದ ವಿವಿಧ ಭಾಗಗಳಲ್ಲಿ ಜನರು ಮನೆಯಿಂದ ಹೊರಬರುತ್ತಿದ್ದಾರೆ. ಹೀಗೆ ಮನೆಯಿಂದ ಹೊರಬಂದು ರಸ್ತೆಗಳಲ್ಲಿ ಓಡಾಡುತ್ತಿರುವವರನ್ನು ತಡೆದ ಪೊಲೀಸರು ಕಸಗುಡಿಸುವ ಶಿಕ್ಷೆ ನೀಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಎಷ್ಟೇ ಕಟ್ಟಪ್ಪಣೆ ಮಾಡಿದರೂ ಹಲವರು ಅನಗತ್ಯವಾಗಿ ಮನೆಯಿಂದ ಆಚೆ ಬಂದು ರಸ್ತೆಗಳಲ್ಲಿ ವಾಹನಗಳಲ್ಲಿ ಓಡಾಡುತ್ತಿದ್ದಾರೆ. ಹೀಗೆ ಹೊರ ಬಂದಿರುವವರ ಮೇಲೆ ಪೊಲೀಸರು ಕೆಲವೆಡೆ ಲಾಠಿ ಚಾರ್ಜ್, ಬಸ್ಕಿ ಹೊಡೆಸುವುದು ಮಾಡಿದ್ದರೆ ಕಲಬುರಗಿಯಲ್ಲಿ ರಸ್ತೆಯಲ್ಲಿ ಕಸಗುಡಿಸಿ ಕ್ಲೀನ್ ಮಾಡುವಂತೆ ಸೂಚಿಸಿದ್ದಾರೆ.

ಮನೆಯಿಂದ ಹೊರ ಬಂದ ಬೈಕ್ ಸವಾರರಿಗೆ ಪ್ರಕಾಶ್ ಏಶಿಯನ್ ಮಾಲ್ ವೃತ್ತದಲ್ಲಿ ರಸ್ತೆ ಕುಸಗುಡಿಸಿ ಸ್ವಚ್ಛ ಮಾಡುವಂತೆ ಶಿಕ್ಷೆ ನೀಡಿದ್ದಾರೆ. ಇನ್ನು ಕೆಲವರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button