ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾರಣಾಂತಿಕ ಕೊರೊನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ ಒಂದು ವಾರ ಕಾಲ ರಾಜ್ಯಾದ್ಯಂತ ಮಾಲ್, ಸಿನಿಮಾ ಥಿಯೇಟರ್,ನೈಟ್ ಕ್ಲಬ್, ಪಬ್, ಸಾರ್ವಜನಿಕ ಸಭೆ, ಸಮಾರಂಭ, ಅದ್ಧೂರಿ ಮದುವೆ ನಡೆಸದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಈ ಹಿನ್ನಲೆಯಲ್ಲಿ ಒಂದುವಾರ ಕಾರ್ನಾಟಕ ತಾತ್ಕಾಲಿಕ ಬಂದ್ ಆಗಲಿದೆ.
ಈ ಹಿನ್ನಲೆಯಲ್ಲಿ ಒಂದು ವಾರ ರಾಜ್ಯದಲ್ಲಿ ಏನೆಲ್ಲ ಬಂದ್ ಇರತ್ತೆ? ಏನೆಲ್ಲಾ ಲಭ್ಯವಿರಲಿದೆ ಎಂಬ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಯಾವುದು ಬಂದ್?:
* ಕೊರೊನಾ ಸಾಂಕ್ರಾಮಿಕ ರೋಗ ಎಂದು ಸರ್ಕಾರ ಘೋಷಿಸಿದ್ದು 15 ದಿನಗಳ ಕಾಲ ಎಲ್ಲ ಸರ್ಕಾರಿ, ಖಾಸಗಿ ಶಾಲಾ, ಕಾಲೇಜುಗಳಿಗೆ ರಜೆ.
* ಸ್ವಿಮ್ಮಿಂಗ್ ಪೂಲ್ ಬಂದ್, ಸಮ್ಮರ್ ಕ್ಯಾಂಪ್ ಗಳಿಗೆ ನಿಷೇಧ
* ಮಾಲ್, ಸಿನಿಮಾ ಥಿಯೇಟರ್, ಪಬ್ ಅಂಡ್ ನೈಟ್ ಕ್ಲಬ್, ಸಭೆ-ಸಮಾರಂಭ ಗಳಿಗೆ ನಿಷೇಧ
* ಜಾತ್ರೆಗಳು ಮತ್ತು ಕ್ರೀಡಾ ಚಟುವಟಿಕೆ ಬಂದ್
* ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಆದೇಶ
* ನಿಗದಿಯಾಗಿದ್ದ ಪ್ರವಾಸವನ್ನು ಜನರು ರದ್ದು ಮಾಡಲು ಸೂಚನೆ
* ಸರ್ಕಾರದ ಕಾರ್ಯಕ್ರಮಗಳು ಒಂದುವಾರ ರದ್ದು
* ಅಂತಾರಾಷ್ಟ್ರೀಯ ವೀಸಾಗಳಿಗೆ ಏಪ್ರಿಲ್.15ರ ವರೆಗೆ ನಿರ್ಬಂಧ.
ಯಾವುದು ಲಭ್ಯ?:
* ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಣೆ
* ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಾರ್ಯ ನಿರ್ವಹಣೆ
* ಬಹುಮುಖ್ಯ ಪರೀಕ್ಷೆಗಳು ಯಥಾಸ್ಥಿತಿ ಮುಂದುವರಿಕೆ
* ಸರಳ ಮದುವೆಗಳಿಗೆ ಮಾತ್ರ ಅವಕಾಶ.
* ಔಷಧ ಅಂಗಡಿ, ತರಕಾರಿ, ಹಣ್ಣು, ಹಾಲು-ಮೊಸರು ಅಗತ್ಯ ವಸ್ತುಗಳು ಲಭ್ಯ
* ಅಧಿವೇಶನ ಮತ್ತು ಸರ್ಕಾರಿ ಕಚೇರಿಗಳು ಎಂದಿನಂತೆ ನಡೆಯಲಿದೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ