ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ, ದೇಶದ ಕಷ್ಟದ ಪರಿಸ್ಥಿತಿಯಲ್ಲಿದೆ. ಭಾರತ ಇಡೀ ವಿಶ್ವಕ್ಕೆ ತನ್ನ ಮಾರ್ಗ ತೋರಿಸಿದೆ. ಸಂಘಟಿತ ಪ್ರಯತ್ನದಿಂದ ಮಾನವಕುಲ ಉಳಿದಿದೆ ಎಂದು ಹೇಳಿದ್ದಾರೆ.
ಎಲ್ಲ ಆರೋಗ್ಯ ಸಿಬ್ಬಂದಿ ಮತ್ತು ಕೊರೊನಾ ವಾರಿಯರ್ಸ್ ಗಾಗಿ ನಿಮ್ಮೆಲ್ಲರ ಪ್ರಾರ್ಥನೆ ಅಗತ್ಯವಿದೆ. ಸಂಘಟಿತ ಪ್ರಯತ್ನದಿಂದ ಮಾನವಕುಲ ಕೊರೊನಾದ ವಿರುದ್ಧದ ಹೋರಾಟದಲ್ಲಿ ಗೆಲ್ಲಬಹುದಾಗಿದೆ. ಭಾರತೀಯ ಸಂಸ್ಕತಿ, ಜೀವನಶೈಲಿ ಇತರೆ ದೇಶಗಳಿಗೆ ಮಾದರಿಯಾಗಿದ್ದು, ನಮ್ಮ ಸಂಪ್ರದಾಯಗಳನ್ನು ಆಚರಿಸುತ್ತಿದ್ದಾರೆ. ಇಂದು ಸಮಾಜ, ವ್ಯವಸ್ಥೆ, ಜನ ಎಲ್ಲವೂ ಬದಲಾಗಿದೆ. ಆದ್ರೆ ಬುದ್ಧನ ಸಂದೇಶಗಳು ಇಂದಿಗೂ ನಮ್ಮ ಜೊತೆಯಲ್ಲಿವೆ. ಬುದ್ಧ ಅಂದ್ರೆ ತ್ಯಾಗ ಮತ್ತು ಸಮರ್ಪಣೆ, ಪವಿತ್ರ ಎಂದರ್ಥ.ದೇಶದ ಎಲ್ಲ ಜನತಗೆ ಬುದ್ಧ ಪೂರ್ಣಿಮೆ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಕೊರೊನಾ ವಾರಿಯರ್ಸ್ 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ಅವರನ್ನು ಗೌರವಿಸಬೇಕು. ಇಡೀ ವಿಶ್ವದಲ್ಲಿ ಹತಾಶೆ, ದುಃಖ, ಸೋಲು ಕಾಣುತ್ತಿದೆ. ಇವೆಲ್ಲವೂಗಳಿಂದ ಹೊರ ಬಂದ್ರೆ ಮಾತ್ರ ಯಶಸ್ಸು ನಮ್ಮದಾಗುತ್ತದೆ. ನಾವು ಸಹ ಬದಲಾದ ಜೀವನಕ್ಕೆ ಹೊಂದಿಕೊಳ್ಳಬೇಕು. ಬುದ್ಧ ಹೇಳಿದಂತೆ ದಯೆ, ಕರುಣೆ, ಸುಖದುಃಖ, ಮೂಲ ರೂಪದಲ್ಲಿರೋದನ್ನು ಸ್ವೀಕರಿಸೋದನ್ನು ನಾವು ಕಲಿಯೋಣ.
ಭಾರತ ನಿಸ್ವಾರ್ಥ ಮತ್ತು ಯಾರನ್ನು ವಿಂಗಡಿಸದೇ ಎಲ್ಲರ ಜೊತೆಯಲ್ಲಿ ನಿಂತಿದೆ. ನಿಮ್ಮ ಶಕ್ತಿಗನುಸಾರವಾಗಿ ದೇಶಕ್ಕಾಗಿ ಸಹಾಯ ಮಾಡಿ. ಭಾರತ ಪ್ರತಿ ನಿವಾಸಿ ಜೀವ ಉಳಿಸಲು ಪ್ರಯತ್ನಿಸುತ್ತಿದೆ. ಮಹಾಮಾರಿಯನ್ನು ಸೋಲಿಸಲು ಭಾರತ ನಿರಂತರವಾಗಿ ಶ್ರಮಿಸುತ್ತಿದೆ. ಇಂತಹ ಕಠಿಣ ದಿನಗಳು ನಮ್ಮನ್ನು ಸದೃಢ ಮಾಡುತ್ತವೆ. ನಾವು ಶೀಘ್ರದಲ್ಲಿಯೇ ಎಲ್ಲ ಕಷ್ಟಗಳಿಂದ ಹೊರ ಬರಲಿದ್ದೇವೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ