Latest

ಕೊರೊನಾ ಗೆದ್ದು ಬಂದ ಬಾಣಂತಿ; ಅಮ್ಮನ ಮಡಿಲು ಸೇರಿದ ಹಸುಗೂಸು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಗು ಹುಟ್ಟಿದ ನಾಲ್ಕೇ ದಿನದಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಬೆಂಗಳೂರಿನ ಮಹಿಳೆ ಇದೀಗ ಸಂಪೂರ್ಣ ಗುಣಮುಖಳಾಗಿದ್ದು, 28 ದಿನಗಳ ಬಳಿಕ ತನ್ನ ಹಸುಗೂಸನ್ನು ಅಪ್ಪಿ ಭಾವುಕರಾದ ಘಟನೆ ಬೆಂಗಳೂರಿನ ದೊಡ್ಡಬಸ್ತಿಯಲ್ಲಿ ನಡೆದಿದೆ.

ರೋಗಿ ನಂಬರ್ 259 ಮಹಿಳೆ ಕೊರೊನಾದಿಂದ ಗುಣಮುಖರಾಗಿ ತನ್ನ ಮನೆಗೆ ವಾಪಸ್ಸಾಗಿದ್ದಾರೆ. ಕೊರೊನಾ ಕಾರಣದಿಂದ ಡೆಲಿವರಿಯಾದ ನಾಲ್ಕೇ ದಿನದಲ್ಲಿ ತನ್ನ ಹಸುಗೂಸಿನಿಂದ ದೂರವಾಗಿದ್ದರು. ಮಗುವಿಗೆ ಎದೆಹಾಲು ಉಣಿಸಲಾಗದಂತಹ ಅಸಹಾಯಕ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ 28 ದಿನಗಳ ಬಳಿಕ, ಈ ಮಹಿಳೆ ಕೊರೊನಾ ಗೆದ್ದು ಮನೆಗೆ ಬಂದಿದ್ದು, ತನ್ನ ಹಸುಗೂಸನ್ನ ಕಂಡು ಭಾವುಕರಾಗಿದ್ದಾರೆ.

ಈ ಕುರಿತು ಮಾತನಾಡಿರುವ ಮಹಿಳೆ, ಕೊರೊನಾ ಸೋಂಕಿನಿಂದ ಗುಣಮುಖವಾಗಿ ಮನೆಗೆ ಬಂದಿದ್ದು, ತುಂಬಾ ದಿನಗಳ ನಂತರ ನನ್ನ ಮಗುವನ್ನು ನೋಡಿದೆ ಸಂತೋಷವಾಗುತ್ತಿದೆ ಎಂದು ಭಾವುಕರಾದರು.

ಆಸ್ಪತ್ರೆಯಿಂದ ಮನೆಗೆ ಬಂದ ಕೊರೊನಾ ಗೆದ್ದ ಮಹಿಳೆಗೆ ಸ್ಥಳೀಯ ಮುಸ್ಲಿಂ ಬಾಂಧವರು, ವೈದ್ಯಾಧಿಕಾರಿಗಳು, ಅಧಿಕಾರಿಗಳು ಖುರ್ಚಿ ಮೇಲೆ ಕೂರಿಸಿ ಚಪ್ಪಾಳೆ ತಟ್ಟಿ ಗೌರವಿಸುವುದರ ಜತೆಗೆ ಆತ್ಮಸ್ಥೈರ್ಯ ತುಂಬಿದರು.

Home add -Advt

Related Articles

Back to top button