ಮಾರಣಾಂತಿಕ ಕೊರೊನಾಗೆ ಬಲಿಯಾದವರು ಎಷ್ಟು?

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ವಿಶ್ವಾದ್ಯಂತ ಕಬಂದ ಬಾಹು ಚಾಚಿರುವ ಮಹಾಮಾರಿ ಕೊರೋನಾ ವೈರಸ್ ಗೆ ವಿಶ್ವಾದ್ಯಂತ ಈ ವರೆಗೆ 69,419 ಮಂದಿ ಬಲಿಯಾಗಿದ್ದಾರೆ. ಸುಮಾರು 183 ದೇಶಗಳಲ್ಲಿ ಕೊರೋನಾ ಸೋಂಕು ಹರಡಿದ್ದು, 12,73,794 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಸೋಂಕು ಹರಡಿದ್ದು, 3,37,274 ಮಂದಿಗೆ ಕೊರೋನಾ ವೈರಸ್ ತಗುಲಿದೆ. ನ್ಯೂಯಾರ್ಕ್​ನಲ್ಲಿ 1,23,160 ಮಂದಿಗೆ ಸೋಂಕು ತಗುಲಿದ್ದು, 4159 ಜನರು ಸಾವನ್ನಪ್ಪಿದ್ದಾರೆ. ನ್ಯೂಜರ್ಸಿಯಲ್ಲಿ 37,505 ಜನರಿಗೆ ಕೊರೋನಾ ಸೋಂಕು ಹರಡಿದ್ದು, 917 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಮಿಚಿಗನ್​ನಲ್ಲಿ 15,718 ಜನರಿಗೆ ಕೊರೋನಾ ತಗುಲಿದ್ದು, 617 ಜನರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ 15,151 ಪ್ರಕರಣಗಳು ಪತ್ತೆಯಾದರೆ 349 ಮಂದಿ ಸಾವನ್ನಪ್ಪಿದ್ದಾರೆ.

ಸ್ಪೇನ್​ನಲ್ಲಿ 1,31,646 ಜನರಿಗೆ ಕೊರೋನಾ ಸೋಂಕು ಹರಡಿದೆ. ಇಟಲಿಯಲ್ಲಿ ಈವರೆಗೆ 1,28,948 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಜರ್ಮನಿಯಲ್ಲಿ 1,00,123 ಜನರಿಗೆ ಕೊರೋನಾ ತಗುಲಿದೆ. ಫ್ರಾನ್ಸ್​ನಲ್ಲಿ 93,780 ಮಂದಿಗೆ ಕೊರೋನಾ ಸೋಂಕು ಹರಡಿದೆ.

ಕೊರೋನಾ ಸೋಂಕಿನ ಮೂಲ ಸ್ಥಾನವಾದ ಚೀನಾದಲ್ಲಿ ಈವರೆಗೆ 82,602 ಜನರಿಗೆ ವೈರಸ್ ತಗುಲಿದೆ. ಇರಾನ್​ನಲ್ಲಿ ಒಟ್ಟು 58,226 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇಂಗ್ಲೆಂಡ್​ನಲ್ಲಿ 48,440 ಮಂದಿಗೆ ಕೊರೋನಾ ವೈರಸ್​ ಹರಡಿದೆ. ಟರ್ಕಿಯಲ್ಲಿ 27,069 ಕೊರೋನಾ ಪ್ರಕರಣಗಳು ದೃಢಪಟ್ಟಿವೆ.

ಇಟಲಿಯಲ್ಲಿ ಕಳೆದ ಎರಡು ವಾರಕ್ಕೆ ಹೋಲಿಸಿದರೆ ಸಾವಿನ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ಈವರೆಗೆ ಒಟ್ಟು 15,877 ಜನರು ಕೊರೋನಾಗೆ ಸಾವನ್ನಪ್ಪಿದ್ದಾರೆ. ಇದೇ ಮೊದಲ ಬಾರಿಗೆ ಕಳೆದ 24 ಗಂಟೆಯಲ್ಲಿ 525 ಜನರು ಮೃತಪಟ್ಟಿದ್ದು, ಇದು ಕಡಿಮೆ ಪ್ರಮಾಣದ್ದಾಗಿದೆ ಎಂದು ತಿಳಿದು ಬಂದಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button