ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: – ಜಿಲ್ಲೆಯಲ್ಲಿ ಕೋವಿಡ್-೧೯ ವೈರಾಣುಗಳಿಂದ ಹರಡುವ ಅಪಾಯಕಾರಿ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಕಾರ್ಯಕ್ರಮಗಳಲ್ಲಿ ಜನದಟ್ಟಣೆಯನ್ನು ನಿಯಂತ್ರಿಸಲು ಮುಂಜಾಗೃತ ಕ್ರಮಗಳನ್ನು ವಹಿಸಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಜೇಂದ್ರ ಕೆ.ವಿ ಅವರು ತಿಳಿಸಿದ್ದಾರೆ.
ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ಅತ್ಯಗತ್ಯ ಸೇವೆಗಳನ್ನು ಒದಗಿಸಲು ಸಾರ್ವಜನಿಕ ಕಚೇರಿಗಳ ಕಾರ್ಯ ನಿರ್ವಹಣೆಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಸಾರ್ವಜನಿಕರು ತುರ್ತು ಅಲ್ಲದ ಕೆಲಸಗಳಿಗೆ ಸಹ ಸಾರ್ವಜನಿಕ ಕಚೇರಿಗೆ ಅಲೆದಾಡುತ್ತಿರುವುದು ಮತ್ತು ಗುಂಪಿನಲ್ಲಿ ಬಂದು ಮನವಿಗಳನ್ನು ನೀಡುತ್ತಿರುವುದು ಗಮನಕ್ಕೆ ಬಂದಿದೆ.
ಈ ರೀತಿಯ ಬೆಳವಣಿಗೆಗಳು ಕೋವಿಡ್-೧೯ ವೈರಾಣುಗಳ ತಡೆಗಟ್ಟುವಿಕೆಗೆ ಮಾರಕವಾಗಿದೆ. ಅಲ್ಲದೇ ಸಾರ್ವಜನಿಕರಿಗೆ, ಸಾರ್ವಜನಿಕ ಕಚೇರಿಯ ಅಧಿಕಾರಿ, ಸಿಬ್ಬಂದಿಗಳ ಆರೋಗ್ಯದ ಮೇಲೆ ಸಹ ಪ್ರತಿಕೂಲ ಪರಿಣಾಮ ಬೀಳುವ ಸಂಭವ ಇರುತ್ತದೆ ಎಂದು ತಿಳಿಸಿದ್ದಾರೆ.
ಎಲ್ಲ ಸಾರ್ವಜನಿಕರು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತ ಕಚೇರಿ ಹಾಗೂ ಈ ಕಚೇರಿ ಅಧೀನದಲ್ಲಿ ಬರುವ ಇಲಾಖೆಗಳ ಕಚೇರಿಗಳಿಗೆ ಅನವಶ್ಯಕವಾಗಿ ಭೇಟಿ ನೀಡುವ ಕ್ರಮವನ್ನು ತಾತ್ಕಲಿಕವಾಗಿ ಕೈಬಿಟ್ಟು ದೂರವಾಣಿ ಸಂಖ್ಯೆಗಳ ಮುಖಾಂತರ ತಮ್ಮ ಸಮಸ್ಯೆ, ಅಹವಾಲುಗಳನ್ನು ಸಲ್ಲಿಸಬೇಕು ಹಾಗೂ ಸೇವೆಯನ್ನು ಪಡೆಯಬೇಕು ಎಂದು ರಾಜೇಂದ್ರ ಕೆ.ವಿ ಅವರು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ ಕಾರ್ಯಾಲಯದ ದೂರವಾಣಿ ಸಂಖ್ಯೆಗಳು:
೨೪೦೭೨೧೨, ೨೪೦೭೨೧೩, ೨೪೦೭೨೧೦, ೨೪೦೭೨೦೮ ಗೆ ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.
ತಾಲೂಕು ಪಂಚಾಯತ ಕಚೇರಿಯ ದೂರವಾಣಿ ಸಂಖ್ಯೆಗಳು:
ಬೆಳಗಾವಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದೂರವಾಣಿ ಸಂಖ್ಯೆ ೦೮೩೧ -೨೪೦೭೨೨೯, ಖಾನಾಪೂರ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ೦೮೩೩೬-೨೨೨೨೨೯, ೨೨೩೫೯೩, ಬೈಲಹೊಂಗಲ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದೂರವಾಣಿ ಸಂಖ್ಯೆ ೦೮೨೮೮-೨೩೩೧೮೭, ಸವದತ್ತಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದೂರವಾಣಿ ಸಂಖ್ಯೆ ೦೮೩೩೦-೨೨೨೩೫೪, ೨೨೩೮೮೬.
ರಾಮದುರ್ಗ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದೂರವಾಣಿ ಸಂಖ್ಯೆ ೦೮೩೩೫-೨೪೨೧೩೭, ಹುಕ್ಕೇರಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದೂರವಾಣಿ ಸಂಖ್ಯೆ ೦೮೩೩೩-೨೬೫೦೩೭, ಗೋಕಾಕ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ೦೮೩೩೨-೨೨೫೦೬೩, ಚಿಕ್ಕೋಡಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದೂರವಾಣಿ ಸಂಖ್ಯೆ ೦೮೩೩೮-೨೭೨೧೩೯, ರಾಯಬಾಗ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದೂರವಾಣಿ ಸಂಖ್ಯೆ ೦೮೩೩೧-೨೨೫೬೭೦, ಅಥಣಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದೂರವಾಣಿ ಸಂಖ್ಯೆ ೦೮೨೮೯-೨೫೧೧೪೧ ಗೆ ಸಂಪರ್ಕಿಸಬೇಕು ಎಂದು ಅವರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ