ಕರ್ನಾಟಕದಲ್ಲಿ ಇಂದು ಒಂದೇ ದಿನ 12 ಕೊರೊನಾ ಪ್ರಕರಣ ಪತ್ತೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂದು ಒಂದೇ ದಿನ ರಾಜ್ಯದಲ್ಲಿ 12 ಹೊಸ ಕೊರೊನಾ ಸೋಂಕಿತರ ಪ್ರಕರಣ ಪತ್ತೆಯಾಗಿದ್ದು, ಅವರಲ್ಲಿ 7 ಮಂದಿ ದೆಹಲಿಯ ನಿಜಾಮುದ್ದೀನ್ ಜಮಾತ್​ ಸಭೆಗೆ ಹೋಗಿ ಬಂದವರಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 175ಕ್ಕೆ ಏರಿಕೆಯಾಗಿದೆ.

ಬೆಂಗಳೂರು,ಬಾಗಲಕೋಟೆ, ಮಂಡ್ಯ, ಗದಗ ಮತ್ತು ಕಲಬುರ್ಗಿಯಲ್ಲಿ ಇಂದು ಒಟ್ಟು 12 ಜನರಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಮಂಡ್ಯ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮೂರು ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.

33 ವರ್ಷದ ಬಾಗಲಕೋಟೆಯ ಮುಧೋಳ ನಿವಾಸಿಯಲ್ಲಿ ಸೋಂಕು ಪಾತ್ತೆಯಾಗಿದ್ದು, ಮಾರ್ಚ್ 13-18 ರವರೆಗೆ ಈತ ದೆಹಲಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸದ್ಯ ಬಾಗಲಕೋಟೆಯ ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬಾಗಲಕೋಟೆಯ 41ವರ್ಷದ ಮಹಿಳೆಗೂ ಸೋಂಕು ಖಚಿತವಾಗಿದ್ದು, ಈಕೆ ರೋಗಿ 125 ರ ನೆರೆಯವರಾಗಿದ್ದಾರೆ. ಗದಗ ಮೂಲದ 80 ವರ್ಷದ ವೃದ್ಧೆಗೆ ಸೋಂಕು ತಗುಲಿದ್ದು, ತೀವ್ರ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದು, ಗದಗ್​​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನ 29 ವರ್ಷದ ವ್ಯಕ್ತಿ ಹಾಗೂ 50 ವರ್ಷದ ವ್ಯಕ್ತಿಯಲ್ಲಿ ಸೋಂಕು ತಗಲಿದ್ದು, ಇವರು ದೆಹಲಿಯ ನಿಜಾಮುದ್ದೀನಾ ಜಮಾತ್​​ ಧರ್ಮಸಭೆಯಲ್ಲಿ ಭಾಗಿಯಾಗಿದ್ದರು. ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 35 ವರ್ಷದ ವ್ಯಕ್ತಿಯಲ್ಲೂ ಸೋಂಕು ಕಾಣಿಸಿಕೊಂಡಿದ್ದು ಇವರು ಕೂಡ ದೆಹಲಿ ಸಭೆಯಲ್ಲಿ ಭಾಗಿಯಾಗಿದ್ದರು

ಮಂಡ್ಯದ 32 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, P-134,135,136,137,138, ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದವರ ಸಂಪರ್ಕ ಹೊಂದಿರು. ಮಂಡ್ಯದ 36 ವರ್ಷದ ಸೋಂಕಿತ ಕೂಡ P-134, 135,136,137,138, ಟಿ ಜೆ ಹಿನ್ನೆಲೆ ಇರುವ ಪ್ರಕರಣಗಳ ಸಂಪರ್ಕ ಹೊಂದಿದ್ದಾರೆ.‌ ಇನ್ನು ಮಂಡ್ಯದ ಮತ್ತೋರ್ವ 65 ವರ್ಷದ ವ್ಯಕ್ತಿಗೆ P-134, 135,136,137,138, ಟಿ ಜೆ ಹಿನ್ನೆಲೆ ಇರುವ ಪ್ರಕರಣಗಳ ಸಂಪರ್ಕ ಹೊಂದಿದ್ದರು. ಮೂವರಿಗೂ ಮಂಡ್ಯದಲ್ಲಿ ಚಿಕಿತ್ಸೆ ಮುಂದುವರಿದೆ.

ಕಲರ್ಬುಗಿಯ 28 ವರ್ಷದ ಮಹಿಳೆಗೆ ಸೋಂಕು ತಗಲಿದ್ದು, ಈಕೆ P-124 ರ ಸಂಪರ್ಕಿತರ ಸೊಸೆಯಾಗಿದ್ದಾರೆ. ಇನ್ನು ಕಲರ್ಬುಗಿಯ 57 ವರ್ಷದ ವ್ಯಕ್ತಿಗೆ ಸೋಂಕು ಇದ್ದು, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವರನ್ನು‌ ಕಲರ್ಬುಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button