ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ವೈರಸ್ ಪರಿಹಾರದ ಭಾಗವಾಗಿ ಹಾಗೂ ಬಡವರಿಗೆ ನೆರವಾಗುವ ನಿಟ್ಟಿನಲ್ಲಿ 1.70 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೆಜ್ ನ್ನು ಕೇಂದ್ರ ಸರ್ಕಾರ ಘೋಷಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೊರೊನಾ ವೈರಸ್ ಹತೋಟಿಗೆ ಹರಸಾಹಸ ಪಡುತ್ತಿರುವ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ, ವೈದ್ಯಕೀಯ ಕಾರ್ಯಕರ್ತರಿಗೆ ಪ್ರತಿ ವ್ಯಕ್ತಿಗೆ 50 ಲಕ್ಷ ರೂ. ವರೆಗೆ ಇನ್ಷೂರೆನ್ಸ್ ಘೋಷಣೆ ಮಾಡಿದ್ದಾರೆ.
ಪಿಎಂ ಗರೀಬ್ ಯೋಜನೆಯನ್ನು ಘೋಷಿಸಲಾಗಿದ್ದು ಬಡವರಿಗೆ ಮುಂದಿನ ಮೂರು ತಿಂಗಳ ವರೆಗೆ ಪ್ರತಿಯೊಬ್ಬನಿಗೆ 5 ಕೆಜಿ ಅಕ್ಕಿ, 1 ಕೆಜಿ ಧಾನ್ಯಗಳು ಉಚಿತವಾಗಿ ಸಿಗಲಿವೆ. ಪ್ರಸ್ತುತ ಜಾರಿಯಲ್ಲಿರುವ ಎನ್ಎಫ್‌ಎಸ್‌ಎಗೆ ಹೊರತಾದ ಯೋಜನೆಯಾಗಿದೆ. ಎರಡು ಕಂತುಗಳಲ್ಲಿ ಹೆಚ್ಚುವರಿ ಪಡಿತರ ಪಡೆಯಬಹುದು. ಮುಂದಿನ ಮೂರು ತಿಂಗಳು 80 ಕೋಟಿ ಮಂದಿ ಉಚಿತವಾಗಿ 5 ಕೆಜಿ ಗೋದಿ ಅಥವಾ ಅಕ್ಕಿ ಮತ್ತು 1 ಕೆಜಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ಧಾನ್ಯಗಳು ಸಿಗಲಿವೆ ಎಂದು ಹೇಳಿದರು.
ವಿಶೇಷ ಪ್ಯಾಕೇಜ್ ಪ್ರಮುಖಾಂಶಗಳು:
* 8.69 ಕೋಟಿ ರೂ. ರೈತರ ಖಾತೆಗೆ ಏಪ್ರಿಲ್ ತಿಂಗಳಲ್ಲಿ 2 ಸಾವಿರ ರೂ. ಹಣ
* ನರೇಗಾ ಯೋಜನೆ ಅಡಿ ಕೆಲಸ ಮಾಡುವ ಪ್ರತಿ ಕಾರ್ಮಿಕರಿಗೆ 2 ಸಾವಿರ ರೂ. ಹೆಚ್ಚುವರಿ ಹಣ
* ಕೊರೊನಾ ವೈರಸ್ ಸೊಂಕಿತರಿಗೆ ಚಿಕಿತ್ಸೆ ನೀಡುತ್ತಿರುವವರು, ಸೋಂಕಿನ ಅಪಾಯ ಇರುವವರಿಗೆ ಆರೋಗ್ಯ ವಿಮೆ.
* ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ವಿಮೆ.
* ವಿಧವೆಯರು, ಹಿರಿಯ ನಾಗರಿಕರು, ದಿವ್ಯಾಂಗರು ಅಂಗವಿಕರಿಗೆ ಒಂದು ಬಾರಿಯ ಪರಿಹಾರ ಮೊತ್ತ 1,000 ರೂ. ಎರಡು ಕಂತುಗಳಲ್ಲಿ ಬಿಡುಗಡೆ
* 3 ತಿಂಗಳ ಕಾಲ ಮಹಿಳಾ ಜನ ಧನ್ ಖಾತೆಗೆ 500 ರೂ.
* ಉಜ್ವಲ ಯೋಜನೆ ಅಡಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಪಡೆದಿರುವ ಮಹಿಳೆಯರಿಗೆ 3 ತಿಂಗಳ ವರೆಗೂ ಮೂರು ಅನಿಲ ಸಿಲಿಂಡರ್‍ಗಳು ಉಚಿತ ವಿತರಣೆ
* ಮುಂದಿನ ತಿಂಗಳ ಸಂಸ್ಥೆಗಳು ಮತ್ತು ಉದ್ಯೋಗಿಗಳ ಇಪಿಎಫ್ ಮೊತ್ತವನ್ನು ಸರ್ಕಾರವೇ ತುಂಬಲಿದೆ.
* ಇಪಿಎಫ್ ಯೋಜನೆಗೆ ತಿದ್ದುಪಡಿ- ಮರು ಪಾವತಿ ಮಾಡದ ವ್ಯವಸ್ಥೆಯಡಿ ಶೇ.75ರಷ್ಟು ಇಪಿಎಫ್ ಮುಂಗಡ ಮೊತ್ತ ಪಡೆಯಲು ಅವಕಾಶ
* ಕಾರ್ಮಿಕರು 3 ತಿಂಗಳ ಸಂಬಳ ಅಥವಾ ಶೇ.75ರಷ್ಟು ಮುಂಗಡ ಮೊತ್ತ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ