Latest

ಭಾರತದ ಮೊಟ್ಟ ಮೊದಲ ಗರ್ಭಕೋಶ ಕ್ಯಾನ್ಸರ್ ಲಸಿಕೆ ಮಾರುಕಟ್ಟೆಗೆ ಬರಲು ಕ್ಷಣಗಣನೆ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಕ್ಯಾನ್ಸರ್ ಬಂತೆಂದರೆ ಮನುಷ್ಯನ ಕಥೆಯೇ ಮುಗಿಯಿತು ಎಂಬಷ್ಟರ ಮಟ್ಟಿಗೆ ಡೆಡ್ಲಿ ಕಾಯಿಲೆಯಾಗಿ ಬಿಂಬಿಸಲ್ಪಟ್ಟ ದಿನಗಳು ಈಗ ದೂರಾಗುತ್ತಿವೆ. ನಾನಾ ಬಗೆಯ ಕ್ಯಾನ್ಸರ್ ಕೂಡ ಆರಂಭಿಕ ಹಂತದಲ್ಲಿ ನಿವಾರಣೆ ಮಾಡಬಹುದಾದಷ್ಟು ಮಟ್ಟಿಗೆ ವೈದ್ಯಕೀಯ ವಿಜ್ಞಾನ ಬೆಳೆದಿದ್ದು ಇದೀಗ ಭಾರತದ ಮೊದಲ ಗರ್ಭಕಂಠದ ಕ್ಯಾನ್ಸರ್ ಲಸಿಕೆ ಈ ತಿಂಗಳು ಮಾರುಕಟ್ಟೆಗೆ ಬರಲಿದೆ

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಭಾರತದ ಮೊದಲ ಗರ್ಭಕಂಠದ ಕ್ಯಾನ್ಸರ್ ಲಸಿಕೆ ‘CERVAVAC’ ತಯಾರಿಸಲಾಗಿದ್ದು ಈ ತಿಂಗಳಿನಿಂದ ಖಾಸಗಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

CERVAVAC ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕ್ವಾಡ್ರಿವೇಲೆಂಟ್ ಹ್ಯೂಮನ್ ಪ್ಯಾಪಿಲೋಮವೈರಸ್ (qHPV) ಲಸಿಕೆಯಾಗಿದೆ. ಲಸಿಕೆಯ ಪ್ರತಿ ಬಾಟಲಿಯ ಬೆಲೆ 2 ಸಾವಿರ ರೂ. ಆಗಿದ್ದು ಅದರ  ಒಂದು ಬಾಟಲಿಯನ್ನು ಬಳಸಿ  ಎರಡು ಡೋಸ್‌ಗಳನ್ನುನಿರ್ವಹಿಸಬಹುದು ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಹೇಳಿದೆ.

ಕೋವಿಡ್ ಕಾಲದಲ್ಲಿ ಲಸಿಕೆ ಕಂಡುಹಿಡಿಯುವ ಮೂಲಕ ಸಕಾಲಕ್ಕೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಈಗ ಗರ್ಭಕಂಠದ ಕ್ಯಾನ್ಸರ್ ಗೆ ಲಸಿಕೆ ಕಂಡುಹಿಡಿಯುವ ಮೂಲಕ ಮತ್ತೊಂದು ಯಶಸ್ಸಿನ ಹೆಜ್ಜೆ ತುಳಿದಿದೆ.

*ರಮೇಶ್ ಜಾರಕಿಹೊಳಿ ಕೋರ್ಟ್ ನಲ್ಲಿ ಅಫಿಡಫಿಟ್ ಯಾಕೆ ಹಾಕಿದ್ದಾರೆ? ; ಡಿ.ಕೆ.ಶಿವಕುಮಾರ್*

https://pragati.taskdun.com/d-k-shivakumarramesh-jarakiholib-s-yedyurappashivamogga/

*ಮೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ; ಜೂನ್ ತಿಂಗಳಿಂದ ಘೋಷಿಸಿದ ಯೋಜನೆ ಜನರ ಮನೆ ಬಾಗಿಲಿಗೆ; ಡಿ.ಕೆ.ಶಿವಕುಮಾರ್ ಭರವಸೆ*

https://pragati.taskdun.com/d-k-shivakumarcongress-prajadhwanichitradurgaholalkere/

*ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟ*

https://pragati.taskdun.com/media-academy-awarddatti-awardlist/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button