Belagavi NewsBelgaum NewsCrimeLatest

*ಬೆಳಗಾವಿಯಲ್ಲಿ ನಡೆದ ಅಪಘಾತದಲ್ಲಿ ದಂಪತಿ ಸಾವು: ಒಂದು ವರ್ಷದ ಮಗು ಬಚಾವ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಸ್ತೆಯಲ್ಲಿ ನಿಂತಿದ್ದ ಕಂಟೇನರ್ ಲಾರಿಗೆ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪತಿ ಹಾಗೂ ಪತ್ನಿ ಇಬ್ಬರು ಸಾವೊನ್ನೊಪ್ಪಿದ್ದು, ಅವರ ಒಂದು ವರ್ಷದ ಮಗು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೋಳ್ಳಿ ಬಳಿ ಜರುಗಿದೆ.

ಈ ಅಪಘಾತದಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದ ಸಂಭಾಜಿ ನಗರದ ಜಿಗರ ಕಿಶೋರ ನಾಕ್ರಾನಿ ಹಾಗೂ ಆತನ ಹೆಂಡತಿ ಹೇತಿಕಾ (24) ಇವರಿಬ್ಬರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಈ ದಂಪತಿಗಳ ಜೊತೆ ಇದ್ದ ಮಗಳಾದ ಒಂದು ವರ್ಷದ ವೃಷ್ಟಿ (1) ಬದುಕುಳಿದಿದ್ದಾಳೆ.

ಹುಬ್ಬಳ್ಳಿಯಿಂದ ಕೊಲ್ಹಾಪೂರಕ್ಕೆ ಹೋಗುತ್ತಿದ್ದಾಗ ನಿಪ್ಪಾನಿ ಗ್ರಾಮೀಣ ಪೊಲೀಸ್‌ ಠಾಣಾ ವ್ಯಾಪ್ತಿಯ ಕೂಗನೋಳ್ಳಿ  ಚೆಕ್ ಪೋಸ್ಟ್ ಬಳಿ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಕಂಟೇನರ್ ಗೆ ಡಿಕ್ಕಿ ಹೊಡೆದಿದೆ.

ಈ ಬಗ್ಗೆ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

Related Articles

Back to top button