National

*ಸೇನಾ ಶಿಬಿರದ ಮೇಲೆ ಭೂಕುಸಿತ: ಮೂವರು ಯೋಧರು ಸಾವು; 6 ಜನರು ನಾಪತ್ತೆ*

ಪ್ರಗತಿವಾಹಿನಿ ಸುದ್ದಿ: ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಸಿಕ್ಕಿಂನಲ್ಲಿ ಪ್ರವಾಹ ಭೀತಿ ಎದುರಾಗಿದೆ. ಸೇನಾ ಶಿಬಿರದ ಮೇಲೆ ಭೂಕುಸಿತ ಸಂಭವಿಸಿ ದುರಂತ ಸಂಭವಿಸಿದೆ.

Home add -Advt

ಸಿಕ್ಕಿಂ ನ ಛಾಟೆನ್ ಸೇನಾ ಶಿಬಿರದ ಮೇಲೆ ಭೂಕುಸಿತವಾಗಿದ್ದು, ಮೂವರು ಯೋಧರು ಸಾವನ್ನಪ್ಪಿದ್ದಾರೆ. 6 ಜನರು ಕಣ್ಮರೆಯಾಗಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದಾರೆ.

ಸಿಕ್ಕಿಂ ನ ಹಲವೆಡೆಗಳಲ್ಲಿ ಭೂಕುಸಿತ ಸಂಭವಿಸುತ್ತಿದ್ದು, ರಾಜ್ಯದಲ್ಲಿ ಪ್ರವಾಹದ ವಾತಾವರಣ ನಿರ್ಮಾಣವಾಗಿದೆ. ಮನೆಗಳು, ಕಟ್ಟಡಗಳು ಸಂಪೂರ್ಣ ನೆಲಸಮವಾಗಿದ್ದು, ಹಲವೆಡೆ ಹೆದ್ದಾರಿಗಳೇ ಕುಸಿದು ಹೋಗಿವೆ. ನಿಂತಿದ್ದ ವಾಹನಗಳು ಕೊಚ್ಚಿ ಹೋಗಿವೆ. ಸಿಕ್ಕಿಂನ ವಿವಿಧ ಭಾಗಗಳಲ್ಲಿ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು 1500 ಪ್ರವಾಸಿಗರು ಸಿಲುಕಿಕೊಂಡು ಪರದಾಟ ನಡೆಸಿದ್ದಾರೆ.

ಮಂಗನ್ ಜಿಲ್ಲೆಯಲ್ಲಿ ತೀಸ್ತಾ ನದಿಗೆ ಪ್ರವಾಸಿಗರ ವಾಹನವೊಂದು ಉರುಳಿ ಬಿದ್ದು ಓರ್ವ ಸಾವನ್ನಪ್ಪಿದ್ದಾರೆ. ಎಂಟು ಜನರು ನಾಪತ್ತೆಯಾಗಿದ್ದಾರೆ. ಓರ್ವ ಗಂಭೀರವಾಗಿ ಗಾಯಗೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವವರ ಶೋಧಕಾರ್ಯಾಚರಣೆ ನಡೆದಿದೆ.

Related Articles

Back to top button